Thursday, June 24, 2010

Manedevru Kannada - Jeevana Eru Perina Gayana ಜೀವನ ಜೀವನ ಏರುಪೇರಿನಾ ಗಾಯನ

ಸಾಹಿತ್ಯ : ಹಂಸಲೇಖ
ಸಂಗೀತ : ಹಂಸಲೇಖ
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಜೀವನ ಜೀವನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ
ಒಮ್ಮೆ ನೋವು ಒಮ್ಮೆ ನಲಿವು
ಒಮ್ಮೆ ಸೋಲು ಒಮ್ಮೆ ಗೆಲುವು
ಒಮ್ಮೆ ಸರಸ ವಿರಸ ಬೆಸುಗೆ ಬಿರುಕು
ಜೀವನ ಜೀವನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ
ಮದುವೆ ದೇಹದಾ ಜೊತೆ
ಬದುಕು ಲೋಕದ ಜೊತೆ
ಪ್ರಣಯ ವಯಸಿನೆ ಜೊತೆ
ಪ್ರೀತಿ ಮನಸಿನ ಜೊತೆ
ಒಮ್ಮೆ ನೆರಳು ಒಮ್ಮೆ ಬಿಸಿಲು
ಒಮ್ಮೆ ಬೇವು ಒಮ್ಮೆ ಬೆಲ್ಲ
ಒಮ್ಮೆ ಒಡಕು ಸಿಡುಕು ಸ್ವರ್ಗ ನರಕ
ಜೀವನ ಜೀವನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ

1 comment: