Friday, March 4, 2011

Krishnan'n Love Story (2010) - Mosa Madalendu Neenu Bandeya Lyrics

ಮೋಸ ಮಾಡಲೆಂದೇ ನೀನು ಬಂದೆಯಾ

ಪ್ರೀತಿ ಹೆಸರ ಹೇಳಿ ಎದುರು ನಿಂತೆಯ

ನಕ್ಕ ಹಾಗೆ ನಟನೆ ಮಾಡಿ ಕಾದೆಯ

ನಗುವ ಸದ್ದಿನಲ್ಲೇ ಹೃದಯ ಒಡೆದೆಯ

ನಂಬೋದೆ ಪ್ರೀತಿ ಅನ್ನೋ.. ಲೆಕ್ಕಾನೆ ತಪ್ಪು ಎಂಬ ....೨

ಪಾಠನ ಹೇಳಬಂದೆಯ.......

ಹೋದರೆ ಹೋಗೆ ನೀ ದೂರ... ನನ್ನಿಂದ ದೂರನೇ ದೂರ....

ಮೋಸ ಮಾಡಲೆಂದೇ





ನಾ ರಾಶಿ ರಾಶಿ ಕನಸ ಕೂಡಿಸಿದ್ದೆ

ನೀ ಅದರ ಮೇಲೆ ಬೆಂಕಿ ಸುರಿದು ಹೋದೆ...

ಪ್ರಿತಿಸೋದಂದ್ರೆ ಏನು ಮಕ್ಕಳ ಆಟ ಏನು .....೨

ಸಾಕೆಂದು ಎದ್ದು ಹೋಗೋಕೆ

ಎಲ್ಲಾನು ಒಳ್ಳೆದಾದ್ರೆ... ಮೋಸಕ್ಕೆ ಮೋಸ ಅಂತ ....೨

ನೋವನ್ನು ನೀಡಿ ಹೋದೆಯಾ....

ಹೋದರೆ ಹೋಗೆ ನೀ ದೂರ.... ನನ್ನಿಂದ ದೂರನೇ ದೂರ...

ಮೋಸ ಮಾಡಲೆಂದೇ





ಸಾ.... ವೇನೆ ಇರದ ಪ್ರೀತಿ ಮಾತನಾಡಿ

ಸೋಲೆಂಬ ಸುಳಿಗೆ ನೂಕಿ ಹೊದೆಯಲ್ಲೇ....

ನೋವನ್ನು ನುಂಗೋ ವಿಧ್ಯೆ ಕಲಿಸಿಹೊದೆ ನೀನು ......೨

ಏನೆಂದು ನಿನ್ನ ಕರೆಯಲಿ

ನೀನೇನೆ ಎಲ್ಲ ಅಲ್ಲ.... ನಿನ್ನಿಂದಲೇ ನಾನು ಅಲ್ಲ ............೨

ನೀನಿಲ್ದೆ ನಾನು ಬಾಳುವೆ ....

ಹೋದರೆ ಹೋಗೆ ನೀ ದೂರ.... ನನ್ನಿಂದ ದೂರನೇ ದೂರ...

ಮೋಸ ಮಾಡಲೆಂದೇ





3 comments: