Sunday, April 19, 2009

MAHA KSHATHRIYA EE BHOOMI

EE BHOOMI BANNADA BUGURI





ಚಿತ್ರ: ಮಹಾಕ್ಷತ್ರಿಯ (1993)
ಸಾಹಿತ್ಯ : ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಒ... ಒಹೊ.. ಒಹೊ...ಒ... ಒಹೊ.. ಒಹೊ...
ಒ... ಒಹೊ.. ಒಹೊ...ಒ... ಒಹೊ.. ಒಹೊ...

ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೊ||

ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ ಓ.. ಓ... ಓ||

ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೊ||

ಮರಿಬೇಡ ತಾಯಿಯ ಋಣವ
ಮರಿಬೇಡ ತಂದೆಯ ಒಲವ
ಹಡೆದವರೇ ದೈವ ಕಣೋ

ಸುಖವಾದ ಭಾಷೆಯ ಕಲಿಸೊ
ಸರಿಯಾದ ದಾರಿಗೆ ನಡೆಸೊ
ಸಂಸ್ಕೃತಿಯೇ ಗುರುವು ಕಣೋ

ಮರೆತಾಗ ಜೇವನ ಪಾಠ
ಕೊಡುತಾನೆ ಚಾಟಿಯ ಏಟ
ಕಾಲ ಕ್ಷಣಿಕ ಕಣೋ ಓ.. ಓ... ಓ||

ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೊ||

ಓ.. ಓ... ಓ....
ಓ.. ಓ... ಓ....

ಮರಿಬೇಡ ಮಗುವಿನ ನಗುವ
ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೇ

ಕಳಬೇಡ ಕೊಲ್ಲಲುಬೇಡ
ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ

ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ ಓ.. ಓ... ಓ||

ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ||

No comments:

Post a Comment