Saturday, May 30, 2009

Avanalli Ivalilli edureduru bandaaga

Avanalli Ivalilli edureduru bandaaga

ಸಂಗೀತ: ಸಾಧು ಕೋಕಿಲ
ಗಾಯಕ: ಎಲ್ ಎನ್ ಶಾಸ್ತ್ರಿ

ಅವನಲ್ಲಿ ಇವಳಿಲ್ಲಿ
ಮಾತಿಲ್ಲಾ ಕಥೆಯಿಲ್ಲಾ
ಎದುರೆದುರು ಬಂದಾಗ
ಹೆದರ್ಹೆದರಿ ನಿಂತಾಗಾ
ಅಲ್ಲೆ ಆರಂಭ ಪ್ರೇಮ || ೨

ನೋಡಿ ನೋಡಿ
ಪ್ರೇಮವನು ಮಾಡೋದಲ್ಲಾ
ಮಾಡುತಲಿ ಹಾಡೋದಲ್ಲಾ
ಹಾಡಿನಲಿ ಹೇಳೋದಲ್ಲಾ
ಹೇಳುವುದ ಕೇಳೋದಲ್ಲಾ
ಕೇಳುತಲಿ ಕಲಿಯೋದಲ್ಲಾ
ಕಲಿತು ನೀ ಮಾಡೋದಲ್ಲಾ
ಮೌನವೇನೆ ಧ್ಯಾನವೇ ಪ್ರೇಮಾಆಆಆ

ಅವನಲ್ಲಿ ಇವಳಿಲ್ಲಿ .......

ನೀನೆ ಎಲ್ಲಾ ನೀನಿರದೆ ಬಾಳೇ ಇಲ್ಲಾ
ಅನ್ನುವುದು ಪ್ರೇಮಾ ಅಲ್ಲಾ
ಮರಗಳನ್ನು ಸುತ್ತೋದಲ್ಲಾ
ಕವನಗಳಾ ಗೀಚೋದಲ್ಲಾ
ನೆತ್ತರಲ್ಲಿ ಬರೆಯೋದಲ್ಲಾ
ವಿಷವನು ಕುಡಿಯೋದಲ್ಲಾ
ಮೌನವೇನೆ ಧ್ಯಾನವೇ ಪ್ರೇಮಾಆಆಆ

ಅವನಲ್ಲಿ ಇವಳಿಲ್ಲಿ .......


No comments:

Post a Comment