Thursday, May 7, 2009

RAMACHAARI - Nammura Yuvarani kalyanavanthe

ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ : ಕೆ.ಜೆ. ಯೇಸುದಾಸ್

ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ
ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ

ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ
ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ

ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
» login or register to post comments | 827 reads

No comments:

Post a Comment