Friday, August 21, 2009

Kannada Lyrics of MANASAARE - YOGA RAJ BHATT

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...

ಚಿತ್ರ:ಮನಸಾರೆ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋಮೂರ್ತಿ
ಗಾಯಕ: ಸೋನು ನಿಗಮ್

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತಿದೆ...
ವ್ಯಾಮೋಹವ ಕೇವಲ ಮಾತಿನಲಿ... ಹೇಳಲು ಬರಬಹುದೇ?
ನಿನ್ನ ನೋಡಿದ ಮೇಲೆಯೂ ಪ್ರೀತಿಯಲೀ... ಬೀಳದೆ ಇರಬಹುದೆ?
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...

ಕಣ್ಣಲಿ ಮೂಡಿದೆ ಹನಿಗವನ... ಕಾಯಿಸಿ ನೀ ಕಾಡಿದರೆ...
ನೂತನ ಭಾವದ ಆಗಮನ... ನೀ ಬಿಡದೇ... ನೋಡಿದರೇ...
ನಿನ್ನ ಧ್ಯಾನದಿ ನಿನ್ನದೆ ತೋಳಿನಲಿ ಹೀಗೆಯೇ ಇರಬಹುದೇ?
ಈ ಧ್ಯಾನವ ಕಂಡರೆ ದೇವರಿಗೂ ಕೊಪವು ಬರಬಹುದೇ?
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತಿದೆ...

ನೆನಪಿನ ಹೂಗಳ ಬೀಸಣಿಕೆ ನೀ ಬರುವ ದಾರಿಯಲಿ...
ಓಡಿದೆ ದೂರಕೆ ಬೀಸಲಿಕೆ ನೀನಿರುವ ಊರಿನಲಿ...
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ?
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ?

ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತಿದೆ...
ವ್ಯಾಮೋಹವ ಕೇವಲ ಮಾತಿನಲಿ... ಹೇಳಲು ಬರಬಹುದೇ?
ನಿನ್ನ ನೋಡಿದ ಮೇಲೆಯೂ ಪ್ರೀತಿಯಲೀ... ಬೀಳದೆ ಇರಬಹುದೆ?
ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತಿದೆ...
ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ
,

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,
ಕನಸುಗಳು ಕೂತಿವೆ ಏನು ಮಾತಾಡದೆ...
ಮರೆಯದ ನೋವಿಗೆ ಮೆಲ್ಲಗೆ, ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ.

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,

ಮನದಲಿ ನಿ೦ತಿದೆ, ಕುದಿಯುವ ಭಾವ ನದಿಯೊ೦ದು
ಸುಡುತಿದೆ ವೇದನೆ, ಒಲವಿನ ಕಲ್ಪನೆ ತ೦ಪನು ಬೀರದೆ...
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ.

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,
ಕನಸುಗಳು ಕೂತಿವೆ ಏನು ಮಾತಾಡದೆ...

ಮಿಡಿತದ ಮುನ್ನುಡಿ, ಎದೆಯಲಿ ಗೀಚಿ ನಡೆವರೆಗೂ...
ಉಳಿಯಲಿ ಹೇಗೆನಾ?
ಮನದ ನೀವೇದನೆ ಮೌನವೇ ಕೇಳುನೀ.....
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ...

ನಿನ್ನ ದನಿ ಕೇಳಿದೆ....ನನ್ನ ನಗು ಕಾಡಿದೆ...
ಸಣ್ಣ ದನಿಯೊ೦ದಿಗೆ...ನನ್ನ ಮನ ಕೂಗಿದೆ...
ನಿನ್ನಯ ಮೌನವೂ....ನನ್ನೆದೆ ಗೀರಲೂ...
ಕನಸುಗಳ ಗಾಯದಿ ಹೃದಯ ಹೋಳಾಗಿದೆ..

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ,
ಕನಸುಗಳು ಸೋತಿವೆ ಏನು ಮಾತಾಡದೆ...
ಮರೆಯದ ನೋವಿಗೆ ಮೆಲ್ಲಗೆ, ಮೆಲ್ಲಗೆ....
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ.

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ....





No comments:

Post a Comment