Friday, February 18, 2011

ಗಾಯನ : ಎಸ್. ಜಾನಕಿ
ಸಂಗೀತ : ಎಂ. ರಂಗರಾವ್
ರಚನೆ : ಆರ್. ಎನ್. ಜಯಗೋಪಾಲ್
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟಕಣ್ಣಲಿ ಬಗೆ ಬಗೆ ತಂತ್ರ
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟಕಣ್ಣಲಿ ಬಗೆ ಬಗೆ ತಂತ್ರ
ಹಣೆಯ ಮೇಗಡೆ ಪಟ್ಟೆ ವಿಭೂತಿ
ಅಂತರಂಗದೆ ಆಷಾಡಭೂತಿ
ಮನಸು ಮಾತ್ರ ದುಂಬಿಯಂತೆ ಹಾರಿದೆ
ದೇಹ ಮಾತ್ರ ದೈವಭಕ್ತಿ ನಟಿಸಿದೆ
ಅಲ್ಲವೆ ಭಾವಾ.........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು
ದಾಡಿ ಬೆಳೆಸಿದವ ಯೋಗಿಯಲ್ಲ
ತಂಬೂರಿ ಹಿಡಿದವ ದಾಸನಲ್ಲ
ಬಿಳಿಯ ಸುಣ್ಣ ಬೆಣ್ಣೆ ಎಂದು ಆಗದು
ಇಂಥ ವೇಷ ಇಂಥ ಮೋಸ ಸಲ್ಲದು
ಹೂಂ.........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ...ಆಆಆಆಆಆಆ.....ಆಆಆಆ......
ಚೈತ್ರಮಾಸಕೆ ಚಿಗುರಿನ ಆಸೆ
ಆಷಾಡಮಾಸಕೆ ಮೋಡದ ಆಸೆ
ಶ್ರಾವಣಮಾಸಕೆ ಗಾಳಿಯ ಆಸೆ
ಮಾರ್ಘಶಿರಕೆ ಮಂಜಿನ ಆಸೆ
ಶ್ರಾವಣಮಾಸಕೆ ಗಾಳಿಯ ಆಸೆ
ಮಾರ್ಘಶಿರಕೆ ಮಂಜಿನ ಆಸೆ
ಸೃಷ್ಟಿಯೆಲ್ಲ ಆಸೆಯಿಂದ ತುಂಬಿದೆ
ಆಸೆಯಿಲ್ಲಿ ಅಡ್ಡದಾರಿ ಹಿಡಿದಿದೆ
ಅಲ್ಲವೇ ಅಕ್ಕಾ........
ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ ಕಳ್ಳ ವೇಷ ಧರಿಸಿ
ಬಂದ ಕಳ್ಳ ವೇಷ ಧರಿಸಿ

No comments:

Post a Comment