Friday, February 18, 2011

Rayaru Bandaru Maavana Manege - Adavi Deviya Kaadu Janagala Ee Haadu

ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ರಾಜ್-ಕೋಟಿ
ಗಾಯನ: ಎಸ್. ಪಿ. ಬಿ., ಚಿತ್ರ.
ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ll ಪ ll
ಕನ್ನಡನಾಡೆ ಮಧುಚಂದ್ರ, ಕನ್ನಡನುಡಿಯೇ ಶ್ರೀಗಂಧ,
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!! ll ಅ.ಪ ll
ಕಾಡುಮಲ್ಲಯಂಗೆ ಜೇನುಕಿತ್ತು ಪೂಜೆ ಕೊಟ್ಟು,
ಜಾಜಿಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು,
ಏಳುಹದ್ದಿಯಿಂದ ಏಳು ರಾತ್ರಿ ಏಳು ಹಗಲು,
ಏಳು ಕನ್ಯೆರಿಂದ ಸೋಬಲಕ್ಕಿ ದೇವಿಗಿಡಲು,
ಚಿಗುರೊಡೆಯಿತು, ಬೆಳಕರಳಿತು, ಹೊಳೆ ತರಿಸಿತು ರಸತಾಣ!
ಮನೆಮನೆಯಲು ಜನಮನದಲು ಶಿವನೊಲವಿನ ಶುಭ ಧ್ಯಾನ!!
ಕನ್ನಡ ನೆಲವೇ ಧನ್ಯ, ಕನ್ನಡ ಜಲವೇ ಮಾನ್ಯ!!!
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! ll ೧ ll
ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನೂ ಕಮ್ಮಿ ಇಲ್ಲ,
ನಮ್ಮ ಪ್ರೀತಿಯಲ್ಲಿ ಸುಳ್ಳು-ಮೋಸ ಒಂದೂ ಇಲ್ಲ..
ನಮ್ಮ ಧರ್ಮದಲ್ಲಿ ಭೇದ-ಭಾವ ಕಾಣೋದಿಲ್ಲ,
ನಮ್ಮ ನೀತಿಯಲ್ಲಿ ಕಾಡೆ ಇಲ್ದೆ ನಾಡೆ ಇಲ್ಲ...
ಗಿಡಮರಗಳೇ ತರುಲತೆಗಳೇ ನದಿವನಗಳೇ ವರದಾನ!
ಜನ ಬೆರೆತರೆ ಸಮರಸದಲಿ ಅದೇ ಒಲವಿನ ಹೊಸ ಗಾನ!!
ಕನ್ನಡ ಜನರೇ ಚೆಂದ, ಕನ್ನಡ ಮನವೇ ಅಂದ!!!
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! ll ೨ ll

2 comments: