Friday, March 4, 2011

Gun ಗನ್ (2011) - Kannada Movie Song Taaja taaja Kanasugalu

ಚಿತ್ರ : ಗನ್

ಸಂಗೀತ:ronnie raphel

ಗಾಯನ : ಚಿನ್ಮಯ್ ,ರಂಜಿತ



ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ

ಇದು ಪ್ರೀತಿ ಮೂಡಿರೋ ಮೊದಲ ಸೂಚನೆ

ರಾಜ ರಾಣಿ ಮನಸುಗಳು ರೋಜಹೂವ ಹುಡುಕುತಿದೆ

ಇದು ಪ್ರೀತಿ ನೀಡಿರೋ ಮಧುರ ಯಾತನೆ

ಅಲೆಮಾರಿ ಸುಕುಮಾರಿ ಜೊತೆ ಸೇರಿ ಹೊಸ ದಾರಿ

ಹಿಡಿದಾಯ್ತು ನಡೆದಾಯ್ತು ಸುಮ್ಮನೆ........


ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ

ಇದು ಪ್ರೀತಿ ಮೂಡಿರೋ ಮೊದಲ ಸೂಚನೆ

ರಾಜ ರಾಣಿ ಮನಸುಗಳು ರೋಜಹೂವ ಹುಡುಕುತಿದೆ

ಇದು ಪ್ರೀತಿ ನೀಡಿರೋ ಮಧುರ ಯಾತನೆ



ಮಳೆ ಬಿಲ್ಲಿನ ತೋರಣ ಮನಕೆ ಕಟ್ಟಾಗಿದೆ

ಇಳಿ ಸಂಜೆಯ ಚಾರಣ ದಿನಚರಿಯಲ್ಲಿ ಸೇರಿದೆ

ಪಿಸುಮಾತು ನುಡಿವಂತ ಮನಸಾಗಿದೆ

ಹಿತವಾದ ಅಪರಾದ ಮೊದಲಾಗಿದೆ

ಕುಶಿ ಇಂದ ಕುಣಿವಂತ ಕುಶಿಯಾಗಿದೆ

ಇದಕಿಂತ ಸೊಗಸಾದ ಸುಖ ಎಲ್ಲಿದೆ.........


ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ

ಇದು ಪ್ರೀತಿ ಮೂಡಿರೋ ಮೊದಲ ಸೂಚನೆ



ಹುಸಿ ಕೋಪವ ತೋರಲು ನೆಪದ ಕೊರತೆ ಇದೆ

ತುಸು ತಾಕಲು ಕೈಗಳು ಹೃದಯ ಹೊರಳಾಡಿದೆ

ಅದೇ ಮಾತು ಅದೇ ಮಾತು ದಿನ ಸಾಗಿದೆ

ನಗುವಂತು ಪುರುಸೊತ್ತು ಕೊಡದಂತಿದೆ

ಎದೆ ತುಂಬಾ ಹೊಸಜಂಬ ನೆಲೆ ನಿಂತಿದೆ

ತುನುತುಂಬ ಭೂಕಂಪ ಶುರುವಾಗಿದೆ.......


ರಾಜ ರಾಣಿ ಮನಸುಗಳು ರೋಜಹೂವ ಹುಡುಕುತಿದೆ

ಇದು ಪ್ರೀತಿ ನೀಡಿರೋ ಮಧುರ ಯಾತನೆ

ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ

ಇದು ಪ್ರೀತಿ ಮೂಡಿರೋ ಮೊದಲ ಸೂಚನೆ

ಅಲೆಮಾರಿ ಸುಕುಮಾರಿ ಜೊತೆ ಸೇರಿ ಹೊಸ ದಾರಿ

ಹಿಡಿದಾಯ್ತು ನಡೆದಾಯ್ತು ಸುಮ್ಮನೆ......


ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ

ಇದು ಪ್ರೀತಿ ಮೂಡಿರೋ ಮೊದಲ ಸೂಚನೆ

ತಾಜಾ ತಾಜಾ ಕನಸುಗಳು ಆಜಾ ಆಜಾ ಎನ್ನುತಿವೆ

ಇದು ಪ್ರೀತಿ ಮೂಡಿರೋ ಮೊದಲ ಸೂಚನೆ


No comments:

Post a Comment