Friday, April 1, 2011

ಗಾನ ಯೋಗಿ ಪಂಚಾಕ್ಷರಿ ಗವಾಯ್ (1995) - Gana yogi Panchakshari Gavayi paaramaartha thathva sukhava

ಸಾಹಿತ್ಯ: ಸರ್ಪ ಭೂಷಣ ಶಿವಯೋಗಿ
ಗಾಯನ: ಕೆ.ಜೆ.ವೈ
ಸಂಗೀತ: ಹಂಸಲೇಖ
ಪಾರಮಾರ್ಥ ತತ್ವ ಸುಖವ ಸೂರೆಗೊಂಬ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ ಮುಕುತಿ ... ೨
ಜನಿಸಿ ತೋರ್ಪ ಜಗವಿದೆಲ್ಲ
ಕನಸಿನಂತೆ ಕೆಡುವುದೆಂದು
ಜನಿಸಿ ತೋರ್ಪ ಜಗವಿದೆಲ್ಲ
ಕನಸಿನಂತೆ ಕೆಡುವುದೆಂದು
ಮನದೊಳರಿತು ಜನಿಸಿ ಕೆಡದ
ಮನದೊಳರಿತು ಜನಿಸಿ ಕೆಡದ
ಚಿನ್ಮಯಾತ್ಮಕನಾದ ಯತಿಗೆ
ದೂರವಿಲ್ಲವೊ ಮುಕುತಿ ದೂರವಿಲ್ಲವೊ ಮುಕುತಿ
ಗುರು ಭಜಿಸೊ ಕರ್ಮ ನಿವೃತ್ತಿ
ಹರನ ಪೂಜೆ ಶರಣ ಸೇವೆ
ಗುರು ಭಜಿಸೊ ಕರ್ಮ ನಿವೃತ್ತಿ
ಹರನ ಪೂಜೆ ಶರಣ ಸೇವೆ
ಗುರು ಸಿದ್ಧನನು ನೆನೆದು
ಗುರು ಸಿದ್ಧನನು ನೆನೆದು
ಬೆರೆತು ಪೂಜಿಪ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ ಮುಕುತಿ

No comments:

Post a Comment