Sunday, April 24, 2011

Hudugaru (2011) - Neeralli Sanna Aleyondu Lyrics

ಚಿತ್ರ: ಹುಡುಗರು
ವರ್ಷ: 2011
ಸಂಗೀತ: ವಿ. ಹರಿಕೃಷ್ಣ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯನ: ಸೋನು ನಿಗಮ್
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ
ಚೂರಾದ ಚಂದ್ರನೀಗ....
ಇಲ್ಲೊಂದು ಚೂರು, ಅಲ್ಲೊಂದು ಚೂರು
ಒಂದಾಗಬೇಕು ಬೇಗ...
ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ...
ನಡುವೆಲ್ಲೊ ಮೆಲ್ಲಗೆ ಮಾಯವಾದೆಯ....
ಇದ್ದಲ್ಲೆ ಆಲಿಸಬಲ್ಲೆ ನಿನ್ನೆಲ್ಲಾ ಪಿಸುಮಾತು
ನನ್ನಲ್ಲೆ ನೀನಿರುವಾಗ ಇನ್ನೇಕೆ ರುಜುವಾತು...
ನೆನಪಿನಲ್ಲೆ ನೀನೀಗ ಎಂದಿಗಿಂತ ಸನಿಹ‌
ಅಳಿಸಲಾರೆ ನಾನೆಂದು ಮನದ ಗೋಡೆ ಬರಹ...
ಸಹಿಯಾದ ಮೇಲೆ ಸಹಗೀತೆಯೊಂದು ಮರೆಯಾಯಿತೇಕೆ ನೋಡು,
ಇಲ್ಲೊಂದು ಸಾಲು, ಅಲ್ಲೊಂದು ಸಾಲು, ಬೆರೆತಾಗಲೇನೆ ಹಾಡು...
ದಾರೀಲಿ ಹೂಗಿಡವಿಂದು ಕಟ್ಟಿಲ್ಲ ಹೂಮಾಲೆ
ಕಣ್ಣಲ್ಲಿ ಕಣ್ಣಿಡು ನೀನು, ಮತ್ತೆಲ್ಲ ಆಮೇಲೆ...
ಕಾಣಬಲ್ಲೆ ಕನಸಲ್ಲೂ, ನಿನ್ನ ಹೆಜ್ಜೆ ಗುರುತು
ಕೇಳಬೇಡ ಇನ್ನೇನು ನೀನು ನನ್ನ ಕುರಿತು...
ಎದೆಯಾಳದಿಂದ ಮೃದು ಮೌನವೊಂದು ಕರೆವಾಗ ಜಂಟಿಯಾಗಿ,
ಇಲ್ಲೊಂದು ಜೀವ, ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ....

5 comments: