Wednesday, April 13, 2011

Kannada Aishwarya - Aishwarya aishwarya nee nanna usiru kane lyrics

ಐಶ್ವರ್ಯ ಐಶ್ವರ್ಯ ನೀ ನನ್ನ ಉಸಿರು ಕಣೆ

ನಿನ್ನಲ್ಲು ನನ್ನಲ್ಲು ಈ ಪ್ರೀತಿ ಒಂದೆ ಕಣೆ

ಹೇಳು.. ನಿನಗಾಗಿ ನಾನಿಲ್ಲವೇನು

ಪ್ರೀತೀನೆ ಉಸಿರಲ್ಲವೇನು

ನೀನೆ.. ನಾ....ನು



ನಾ ಒಂದು ಪಂಜರ

ನೀನಲ್ಲಿ ಇಂಚರ..

ನೀ ಹಾಡಿದಾಗಲೆ ನಮ್ಮ ಪ್ರೀತಿ ಸುಂದರ

ಬಾ ನನ್ನ ಹತ್ತಿರ

ಬೇಕಿಲ್ಲ ಅಂತರ..

ನಾವೊಂದೆ ಆದರೆ ಸುಖವೆ ನಿರಂತರ

ಈ ಪ್ರೀತಿ ಎಂದೂ ನಿನಗಾಗಿ

ಕಾಯುತಿದೆ ಗಿಳಿಯಾಗಿ..

ನಿನ್ನೆದೆಯ ಮಾತು ತಿಳಿಸು

ಮನಸಾರೆ ಹಿತವಾಗಿ..



ಐಶ್ವರ್ಯ ಐಶ್ವರ್ಯ ನೀ ನನ್ನ ಉಸಿರು ಕಣೆ

ನಿನ್ನಲ್ಲು ನನ್ನಲ್ಲು ಈ ಪ್ರೀತಿ ಒಂದೆ ಕಣೆ

ಹೇಳು.. ನಿನಗಾಗಿ ನಾನಿಲ್ಲವೇನು

ಪ್ರೀತೀನೆ ಉಸಿರಲ್ಲವೇನು

ನೀನೆ.. ನಾ....ನು



ನೀ ಸ್ವರಗಳಾದರೆ ನಾ ಕವಿತೆಯಾಗುವೆ

ನೀ ಕಾಣದಾದರೆ.. ಕಲ್ಲಾಗಿ ಹೋಗುವೆ

ನೀ ಅಪ್ಪಿಕೊಳ್ಳದೆ.. ಎದೆ ಬಡಿತ ಎಲ್ಲಿದೆ

ನೀನೆಲ್ಲೆ ಹೋದರೂ.. ನನ್ನುಸಿರು ಅಲ್ಲಿದೆ

ನಿಜವಾಗಿ ಹೇಳು ಎಲ್ಲಿರುವೆ

ನನ್ನ ಬಿಟ್ಟು ಹೇಗಿರುವೆ..

ಈ ಪ್ರಾಣ ಹೋದರು ಸರಿಯೆ

ನಿನಗಾಗಿ ಕಾದಿರುವೆ..



ಐಶ್ವರ್ಯ ಐಶ್ವರ್ಯ ನೀ ನನ್ನ ಉಸಿರು ಕಣೆ

ನಿನ್ನಲ್ಲು ನನ್ನಲ್ಲು ಈ ಪ್ರೀತಿ ಒಂದೆ ಕಣೆ

ಹೇಳು.. ನಿನಗಾಗಿ ನಾನಿಲ್ಲವೇನು

ಪ್ರೀತೀನೆ ಉಸಿರಲ್ಲವೇನು

ನೀನೆ.. ನಾ....ನು



No comments:

Post a Comment