Thursday, November 24, 2011

Kallarali Hoovaagi(2006) - Hanatheya adiyalle Lyrics by Hamsaekha

ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಶಂಕರ್ ಮಹಾದೇವನ್
ಹಣತೆಯ ಅಡಿಯಲ್ಲೇ ಕತ್ತಲೆಯ ತವರು
ಇರುಳಿನ ಬೇರಲ್ಲೇ ಹೊಂಬೆಳಕಿನ ಚಿಗುರು
ಬೇಕು ಬೇಡ ನಡುವೆ ನೋಡ
ಕಲ್ಲರಳಿ ಹೂವಾಗಿ.. ಹೇ..
ಬಿಸ್ಮಿಲ್ಲಾಹಿ ರಹ್ಮಾನಿ ರಹೀಂ
ಹಣತೆಯ ಅಡಿಯಲ್ಲೇ ಕತ್ತಲೆಯ ತವರು
ಇರುಳಿನ ಬೇರಲ್ಲೇ ಹೊಂಬೆಳಕಿನ ಚಿಗುರು
ಬೇಕು ಬೇಡ ನಡುವೆ ನೋಡ
ಕಲ್ಲರಳಿ ಹೂವಾಗಿ.. ಹೇ..
ಹಾರಿ ಹಾರಿ ಕೇಳುತಿರುವುದೀ ಮನವು
ಮನಸಿನಂತೆ ಹಾರಲುಂಟೇ ದೇಹವು
ಬೇಡ ಎಂಬ ಕಡೆಗೇ ಬಾಳ ತವಕ
ಈ.. ಒಲವು ನಿಯಮ ಮುರಿಯೋದೇ ಅಣಕ
ನಿಯಮ ಬದುಕಿಗೋ, ಬದುಕೇ ನಿಯಮಕೋ ?
ಹಣತೆಯ ಅಡಿಯಲಿ ಕತ್ತಲೆಯ ತವರು
ಇರುಳಿನ ಬೇರಲಿ ಹೊಂಬೆಳಕಿನ ಚಿಗುರು
ಹಣತೆಯ ಅಡಿಯಲ್ಲೇ ಕತ್ತಲೆಯ ತವರು
ಇರುಳಿನ ಬೇರಲ್ಲೇ ಹೊಂಬೆಳಕಿನ ಚಿಗುರು
ಬೇಕು ಬೇಡ ನಡುವೆ ನೋಡ
ಕಲ್ಲರಳಿ ಹೂವಾಗಿ.. ಹೇ..
ಬಿಸ್ಮಿಲ್ಲಾಹಿ ರಹ್ಮಾನಿ ರಹೀಂ
ಈ..ಮಾತಿಗಾಗಿ ಹುಟ್ಟಲಿಲ್ಲ ಪ್ರೇಮ
ಮಾತಿಗಿಂತ ತೀಕ್ಷ್ಣ ಕಣ್ಣ ಮಾತು
ಹೃದಯ ಹೃದಯ ಸೇರೋ ಮೌನ ದನಿಯ
ಆ.. ದೈವ ಮೆಚ್ಚಿ ನಗುವುದಂತೆ
ಒಲವೇ ದೈವಕೋ, ದೈವವೇ ಒಲವಿಗೋ ?
ಹಣತೆಯ ಅಡಿಯಲಿ ಕತ್ತಲೆಯ ತವರು
ಇರುಳಿನ ಬೇರಲಿ ಹೊಂಬೆಳಕಿನ ಚಿಗುರು

No comments:

Post a Comment