ಚಿತ್ರ: ಮುಂಗಾರು ಮಳೆ
ಹಾಡು: ಅನಿಸುತಿದೆ
ಸಂಗೀತ: ಮನೋ ಮೂರ್ತಿ
ಸಾಹಿತ್ಯ: ಜಯಂತ್ ಕಾಯ್ಕಣಿ
ಹಾಡಿದವರು: ಸೋನು ನಿಗಮ್
ವರ್ಷ: ೨೦೦೬
http://www.kannadaaudio.com/Songs/Moviewise/home/MungaruMale.php
ಅನಿಸುತಿದೆ ಯಾಕೊ ಇಂದು..ನೀನೇನೆ ನನ್ನವಳಿದ್ದು
ಮಾಯದ ಲೋಕದಿಂದ..ನನಗಾಗೆ ಬಂದವಳಿದ್ದು
ಆಹಾ ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ..ಹಾಗೆ ಸುಮ್ಮನೆ
ಅನಿಸುತಿದೆ ಯಾಕೊ ಇಂದು..
---------------------೧-------------------------
ಸುರಿಯುವ ಸೋನೆಯು ಸೂಸಿದೆ..ನಿನ್ನದೆ ಪರಿಮಳ
ಇನ್ನು ಯಾರ ಕನಸಲೂ..ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜ ಹಾಕಿದೆ..ನಿನ್ನಯ ಮೊಗವನು ಕಂಡ ಕ್ಷಣ
ನಾ ಖೈದಿ ನೀನೆ ಸೆರೆಮನೆ
ತಪ್ಪಿ ನನ್ನ ಅಪ್ಪಿಕೊ ಒಮ್ಮೆ..ಹಾಗೆ ಸುಮ್ಮನೆ
ಅನಿಸುತಿದೆ ಯಾಕೊ ಇಂದು..
---------------------೨------------------------
ತುಟಿಗಳ ಹೂವಲಿ..ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ..ಕೇವಲ ನಿನ್ನದೆ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ..ಹೃದಯದಿ ನಾನೆ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ..ಹಾಗೆ ಸುಮ್ಮನೆ
ಅನಿಸುತಿದೆ ಯಾಕೊ ಇಂದು..ನೀನೇನೆ ನನ್ನವಳಿದ್ದು
ಮಾಯದ ಲೋಕದಿಂದ..ಬಂದವಳಿದ್ದು
ಆಹ ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ
ಅನಿಸುತಿದೆ ಯಾಕೊ ಇಂದು..
ಮುಂಗಾರು ಮಳೆ(2006)-ಕುಣಿದು ಕುಣಿದು ಬಾರೆ
ಸಂಗೀತ : ಮನೋಮೂರ್ತಿ
ಸಾಹಿತ್ಯ : ಜಯಂತ್ ಕೈಕಿಣಿ
ಗಾಯಕರು : ಉದಿತ್ ನಾರಾಯಣ್, ಸುನಿಧಿ ಚೌಹನ್
ಸಂಗಡಿಗರು : ಜೂಬಾರೆ ಜೂಬಾರೆ ಜೂಬ ಜೂಬ
ಜೂಬಾರೆ ಜೂಬಾರೆ ಜೂಬ ಜೂಬ
ಗಂಡು : ಕುಣಿದು ಕುಣಿದು ಬಾರೆ
ಉಲಿದು ಉಲಿದು ಬಾರೆ
ಕುಣಿವಾ ನಿನ್ನ ಮೇಲೆ ಮಳೆಯ ಹನಿಯಾ ಮಾಲೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹಾ ಬಾರೆ
ಓಲವೇ ವಿಸ್ಮಯ ಓಲವೇ ವಿಸ್ಮಯ
ನಿನ್ನಾ ಪ್ರೇಮ ರೂಪ ಕಂಡು
ನಾನು ತನ್ಮಯ
ಹೆಣ್ಣು : ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೆ ಏರಿ ಹಾರುವ ಬಾರೋ
ಓಲವೇ ವಿಸ್ಮಯ
ಹೆಣ್ಣು : ಇರುಳಲಿ ನೀನೆಲ್ಲೋ ಮೈ ಮುರಿದರೆ
ನನಗಿಲ್ಲಿ ನವಿರಾದ ಹೂ ಕಂಪನ
ಗಂಡು : ಕಣ್ಣಲ್ಲಿ ನೀ ಕಣ್ಣಿಟ್ಟು ಬರ ಸೆಳೆದರೆ
ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ
ಹೆಣ್ಣು : ನಿನ್ನಾ ಕಣ್ಣಾ ತುಂಬಾ ಇರಲಿ ನನ್ನಾ ಬಿಂಬ
ಹೂವಿಗೆ ಬಣ್ಣ ತಂದವನೇ ಪರಿಮಳದಲ್ಲಿ ಅರಳುವ ಬಾರೋ
ಓಲವೇ ವಿಸ್ಮಯ
ಸಂಗಡಿಗರು : ಡೂಬಾರೆ ಡೂಬಾರೆ ಡೂಬ ಡೂಬ
ಜೂಬಾರೆ ಜೂಬಾರೆ ಜೂಬ ಜೂಬ
ಗಂಡು : ಓಲವೇ ನೀ ನೊಲಿದ ಕ್ಷಣದಿಂದಲೆ
ಈ ಭೂಮಿ ಈ ಬಾನು ಹೊಸದಾಗಿದೆ
ಹೆಣ್ಣು : ಖುಷಿಯಿಂದ ಈ ಮನವೆಲ್ಲ ಹೂವಾಗಿರೆ
ಬೇರೇನು ಬೇಕಿಲ್ಲ ನೀನಲ್ಲದೆ
ಗಂಡು : ಕುಣಿದು ಕುಣಿದು ಬಾರೆ
ಉಲಿದು ಉಲಿದು ಬಾರೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹಾ ಬಾರೆ
ಓಲವೇ ವಿಸ್ಮಯ ಓಲವೇ ವಿಸ್ಮಯ
ನಿನ್ನಾ ಪ್ರೇಮ ರೂಪ ಕಂಡು
ನಾನು ತನ್ಮಯ
ಹೆಣ್ಣು : ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೆ ಏರಿ ಹಾರುವ ಬಾರೋ
ಓಲವೇ ವಿಸ್ಮಯ
ಮುಂಗಾರು ಮಳೆ(2006)-ಒಂದೇ ಒಂದು ಸಾರಿ
ಸಂಗೀತ : ಮನೋಮೂರ್ತಿ
ಸಾಹಿತ್ಯ : ಕವಿರಾಜ್
ಗಾಯಕರು : ಸೋನು ನಿಗಂ
ಹೆಣ್ಣು : ಯಾ..ಹೇ..
ಗಂಡು : ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಕಣ್ಣಾ ತುಂಬಾ ನಿನ್ನನ್ನು
ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು
ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು
ನನ್ನೋಳ ನೀನು
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ..
ಹೆಣ್ಣು : ಅ.ಅ.ಅ.ಅ.ಆ
ಆ.ಆ.ಆ.ಆ.ಅ
ಅ.ಅ.ಅ.ಅ.ಆ
ಆ.ಆ.ಆ.ಆ.ಅ
ಅ.ಅ.ಅ.ಅ.ಆ
ಆ.ಆ.ಆ.ಆ.ಅ
ಗಂಡು : ಒಂದೇ ಕ್ಷಣ ಎದುರಿದ್ದು
ಹೆಣ್ಣು : ನನ ನಾನನ ನಾನ ನಾನನ ಆ.ಆ
ಗಂಡು : ಒಂದೇ ಕ್ಷಣ ಎದುರಿದ್ದು
ನನ್ನ ಈ ಬಾಳನು ನೀ ಸಿಂಗರಿಸಿದೆ
ನನ್ನ ಮೈ ಮನಸನು ನೀ ಅವರಿಸಿದೆ
ಹೆಣ್ಣು : ಲಾಲ ಲಾಲ ಲಲಾಲ ಲಾಲಲಾ.
ಗಂಡು : ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಕಣ್ಣಾ ತುಂಬಾ ನಿನ್ನನ್ನು
ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು
ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು
ನನ್ನೋಳ ನೀನು
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಹೆಣ್ಣು : ನಾನಾನ ನಾನನ ಹೇ.ಹೇ.ಹೇ
ನಾನ ನಾನ ನಾನ ನಾನಾನ ಹೇ.ಹೇ.ಹೇ
ನಾನಾನ ನಾನನ ಹೇ.ಹೇ.ಹೇ
ನಾನಾನ ನಾನನ ಹೇ.ಹೇ.ಹೇ
ನಾನಾನ ನಾನ ನಾನ ನಾನ ನಾನ.
ಗಂಡು : ನಿನ್ನಾ ನಗು ನೋಡಿದಾಗ
ಹೆಣ್ಣು : ನನ ನಾನನ ನಾನ ನಾನನ ಆ.ಆ
ಗಂಡು : ನಿನ್ನಾ ನಗು ನೋಡಿದಾಗ
ಹಗಲಲ್ಲೂ ಸಹ ಬಿಳಿ ಬೆಳದಿಂಗಳು
ಸುರಿದಂತಾಯಿತು ಸವಿದಂತಾಯಿತು
ಹೆಣ್ಣು : ಲಾಲ ಲಾಲ ಲಲಾಲ ಲಾಲಲಾ
ಗಂಡು : ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ
ಕಣ್ಣಾ ತುಂಬಾ ನಿನ್ನನ್ನು
ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು
ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು
ನನ್ನೋಳ ನೀನು
ಒಂದೇ ಒಂದು ಸಾರಿ
ಕಣ್ಮುಂದೆ ಬಾರೆ..ಹೆ.ಹೇ..
ಮುಂಗಾರು ಮಳೆ(2006)-ಅರಳುತಿರು ಜೀವದ ಗೆಳೆಯ
ಸಂಗೀತ : ಮನೋಮೂರ್ತಿ
ಸಾಹಿತ್ಯ : ಜಯಂತ್ ಕೈಕಿಣಿ
ಗಾಯಕರು : ಶ್ರೆಯಾ
ಹೆಣ್ಣು : ಅರಳುತಿರು ಜೀವದ ಗೆಳೆಯ
ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ
ಪ್ರೇಮದ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ
ಹೀಗೆ ಸುಮ್ಮನೆ
ಅರಳುತಿರು ಜೀವದ ಗೆಳೆಯ
ಹಕ್ಕಿಯು ಹಾಡಿದೆ
ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ಕಂಪನು
ಯಾರಿಗು ಕೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ
ನಂಟಿಗೆ ಹೆಸರಿನ ಹಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳಯ ನಂಟಿಗೆ ಹೆಸರು
ಯಾಕೇ ಸುಮ್ಮನೆ ಏ.ಏ..
ಅರಳುತಿರು ಜೀವದ ಗೆಳೆಯ
ಮಾತಿಗೆ ಮೀರಿದ
ಭಾವದ ಸೆಳೆತವೆ ಸುಂದರ
ನಲುಮೆಯು ತುಂಬಿದ
ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆ ಆದರು
ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲಿ ನಿನ್ನನೇ
ಇರಲಿ ಗೆಳೆಯ ಈ ಅನುಬಂಧ
ಹೀಗೇ ಸುಮ್ಮನೆ
ಅರಳುತಿರು ಜೀವದ ಗೆಳೆಯ
ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ
ಪ್ರೇಮದ ಬಂಧನದಲ್ಲಿ
ಮನಸಲ್ಲೇ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ
ಹೀಗೆ ಸುಮ್ಮನೆ
ಅರಳುತಿರು ಜೀವದ ಗೆಳೆಯ
ಮುಂಗಾರು ಮಳೆ(2006)-ಇವನು ಗೆಳೆಯನಲ್ಲ
ಸಂಗೀತ : ಮನೋಮೂರ್ತಿ
ಸಾಹಿತ್ಯ : ಶಿವ
ಗಾಯಕರು : ಶ್ರೆಯಾ
ಹೆಣ್ಣು : ಇವನು ಗೆಳೆಯನಲ್ಲ
ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ
ಯಾಕೆ ಈ ತರ
ಜಾಣ ಮನವೆ ಕೇಳು
ಜಾರಬೇಡ ಇವನಾ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ
ಇರಲಿ ಅಂತರ
ಇವನು ಗೆಳೆಯನಲ್ಲ
ಗೆಳತಿ ನಾನು ಮೊದಲೇ ಅಲ್ಲ
ಅ.ಅ.ಆ.ಆ.
ಅ.ಅ.ಆ.ಆ
ಅ.ಅ.ಆ.ಆ
ಅ.ಅ.ಆ.ಆ
ಆ.ಆ..ಆ.ಆ
ಓಲವ ಹಾದಿಯಲ್ಲಿ
ಇವನು ನನಗೆ ಹೂವೋ ಮುಳ್ಳೊ
ಮನದ ಕಡಲಿನಲ್ಲಿ
ಇವನು ಅಲೆಯ ಭೀಕರ ಸುಳಿಯೊ
ಅರಿಯದಂತ ಹೊಸ ಕಂಪನವೊ
ಯಾಕೋ ಕಾಣೆನು
ಅರಿತು ಮರೆತು ಜೀವ
ವಾಲದಂತೆ ಇವನಾ ಕಡೆಗೆ
ಸೋಲದಂತೆ ಕಾಯಿ ಮನವೇ
ಒಲಿಸು ನನ್ನನು
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ
ತಿಳಿದು ತಿಳಿದು ಇವನು
ತನ್ನ ತಾನೇ ಸೋತಿಹನಲ್ಲ
ಒಲುಮೆ ಎಂಬ ಸುಳಿಗೆ
ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲೂ ನಗುವುದ ಬಲ್ಲ
ಎನೋ ಕಳವಳ
ಮುಳುಗುವವನ ಕೂಗು
ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೆ ಈ ಹೃದಯ
ಎನೋ ತಳಮಳ
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ
ಮುಂಗಾರು ಮಳೆ(2006)-ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ಸಂಗೀತ : ಮನೋಮೂರ್ತಿ
ಸಾಹಿತ್ಯ : ಶಿವ
ಗಾಯಕರು : ಶ್ರೆಯಾ
ಸಂಗಡಿಗರು :
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಅಹಾ.ಓಹೋ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಗಂಡು : ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸಂಗಡಿಗರು : ಶಾಬ..ಶಾಬ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಅಹಾ.ಓಹೋ
ಗಂಡು : ಚಿನ್ನಾ ಅಪರಂಜಿಗಿಂತ ಚೆನ್ನ
ನಿನಾ ಹುಡುಗನು
ನಿನ್ನ ನೆರಳಂತೆ ಮೂರು ಹೊತ್ತು
ಜೊತೆಗಿರುವನು
ಯಾರು ಕೊಡದಷ್ಟು ಓಲವಾ ತಂದು
ತಗೋ ಎನುವನು
ಒಂದು ಗಳಿಗೇನು ನಿನ್ನಾ ಬಿಟ್ಟು
ಇರನೂ ಇರನೂ
ಸಂಗಡಿಗರು :
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಗಂಡು : ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತುಕೊಂಡು ಕುಣಿದಾಡುವನು
ಸಂಗಡಿಗರು :
ಏಯ್.ಅಹ.ಅಹಾ.ಶಾಬ
ಓಹೋ.ಅಹ.ಏಯ್
ಅಹ.ಅಹಾ.ಶಾಬ
ಹೋಯ್ ಶಾಬ ಹೋಯ್ ಶಾಬ
ಹೋಯ್ ಶಾಬ ಹೋಯ್ ಶಾಬ
ಹೋಯ್ ಶಾಬ ಒ ಬಲ್ಲೆ
ಒ ಬಲ್ಲೆ ಒ ಬಲ್ಲೆ ಒ ಬಲ್ಲೆ ಒ ಬಲ್ಲೆ
ಗಂಡು : ಅವನ ಮನಸೊಂದು
ಒಲವ ತೂಗೋ
ಜೋಕಾಲಿಯೋ
ಅಲ್ಲಿ ಹಾಡುವಂತ ಜೋಗುಳ ಗಾನ
ಪ್ರೀತಿ ಲಾಲಿಯೋ
ಗೆಳತಿ ಆ ಉಯ್ಯಾಲೆಯಲ್ಲಿ
ಆ ಲಾಲಿಯ ಕೇಳೋ ಭಾಗ್ಯ ಬರೆದು
ಬಾಗಿಲ ತಟ್ಟಿ ಕರೆದಿದೆ ನಿನ್ನಾ
ಸಂಗಡಿಗರು :
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡ
ಗಂಡು : ಸುವ್ವಿ ಸುವ್ವಾಲಿ ನಿನ್ನಾ ಹಾಡಲ್ಲಿ
ರಂಗು ರಂಗೋಲಿ ಎದೆ ಗೂಡಲ್ಲಿ
ಹುಡುಗಿ ಚೆಲುವಾಂತ ಚೆನ್ನಗರಾಯ
ಕೈಯ ಹಿಡಿವನು ನಿನ್ನ
ಹೆಗಲಮೇಲೆ ಹೊತ್ತಿಕೊಂಡು ಕುಣಿದಾಡುವನು
ಸಂಗಡಿಗರು : ಶಾಬ ಶಾಬ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ
ಡಿಂಗ ಡಾಂಗ ಡಿಂಗ ಡಾಂಗ ಡ
ಹೋಯ್..
No comments:
Post a Comment