ಕೆ. ಕಲ್ಯಾಣ್
ಅರಳುವ ಹುವೂಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ
ಬೆಳಗಿನ ಕಿರಣಗಳೇ ಬಣ್ಣಿಸಿರಿ, ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
ಮನವೇ ಓ ಮನವೇ ನೀ ಅಳುಕದಿರು, ಮಳೆಯೋ ಬರಸಿಡಿಲೋ ನೀ ನಡೆಯುತಿರು.
ಮನಸುಯೆಂಬ ಕನ್ನಡಿಯು ಹೊಡೆದು ಹೋಗಬಾರದು, ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು
ಯಾರಿಗಿಲ್ಲಿ ನೋವಿಲ್ಲಾ? ಯಾರಿಗಿಲ್ಲಿ ಸಾವಿಲ್ಲಾ?, ಕಾಲಕಳೆದ ಹಾಗೆ ಎಲ್ಲಾ ಮಾಯವಾಗುವಂತದು
ಉಳಿಪೆಟ್ಟು ಬೀಳುವಕಲ್ಲೇ ಶಿಲೆಯಾಗಿ ನಿಲ್ಲುವುದು, ದಿನನೋವ ನುಂಗುವ ಜೀವವೇ ನೆಲೆಯಾಗಿ ನಿಲ್ಲುವುದು
ಯಾರಿಗಿಲ್ಲ ಅಲೆದಾಟ ? ಯಾರಿಗಿಲ್ಲ ಪರದಾಟ ? ನಮ್ಮ ಪ್ರತಿಕನಸು ಇಲ್ಲಿ ನನಸಾಗೋ ಒಳ್ಳೇ ಕಾಲವು ಮುಂದೆ ಇದೆ
ಮನವೇ ಓ ಮನವೇ ನೀ ಕುಗ್ಗದಿರು ಬೆಟ್ಟ ಬಯಲಿರಲಿ ನೀ ನುಗ್ಗುತಿರು.
ಅರಳುವ ಹುವೂಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ
ನೋವು ನಲಿವು ಅನ್ನೋದು ಬಾಳ ರೈಲು ಕಂಬಿಗಳು, ನಡುವೆ ನಮ್ಮದೀ ಪಯಣ, ನಗುತ ಸಾಗು ಹಗಲಿರುಳು
ಏನೇ ಬರಲಿ ಬಾಳಿನಲಿ ಧ್ಯೇಯವೊಂದು ಜೊತೆಯಿರಲಿ, ಏಳುಬೀಳು ಎಲ್ಲದಾಟಿ ಏಳುತೀವಿ ನಾವುಗಳು
ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ, ನಾವೆಲ್ಲರು ಎಂದು ಒಂದೆ ಆ ದೇವರ ಸೃಷ್ಟಿಯಲಿ
ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದು ದಾರಿಯಿದೆ
ನಿನ್ನ ಆತ್ಮಬಲ ನಿನ್ನ ಜೊತೆಯಿರಲು ಆಕಾಶವೆ ಅಂಗೈಲಿ
ಮನವೇ ಓ ಮನವೇ ನೀ ಬದಲಾಗು, ಏನೇ ಸಾಧನೆಗೂ ನೀ ಮೊದಲಾಗು.
ಅರಳುವ ಹುವೂಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ
ಬೆಳಗಿನ ಕಿರಣಗಳೇ ಬಣ್ಣಿಸಿರಿ, ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
ಮನವೇ ಓ ಮನವೇ ನೀ ಅಳುಕದಿರು, ಮಳೆಯೋ ಬರಸಿಡಿಲೋ ನೀ ನಡೆಯುತಿರು.
KILA KILA NAGEYA
ಚಿತ್ರ : ಮೈ ಆಟೋಗ್ರಾಫ್
ಸಾಹಿತ್ಯ : ಕೆ.ಕಲ್ಯಾಣ್
ಸಂಗೀತ : ಭರದ್ವಾಜ್
ಗಾಯನ : ಚೇತನ್ ಸಾಸ್ಕ
ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಇ ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ
ಒಂಟಿ ಜೀವಕೆ ಜಂಟಿಯಾದಳು ಪ್ರೀತಿ ಗೆಳತಿ
ನನ್ನ ಕನಸುಗಳಿಗೆ ಕಚಕುಳಿಯಿಟ್ಟು ಕುಣಿಯೋರೀತಿ
ಗೆಳತಿ ನಿನ್ನಾಜೊತೆಯಲಿ ಇ ಹೃದಯ ಹರಳೋಯ್ತು
ನಿನ್ನ ಸ್ನೇಹವೆ ನನ್ನ ಬದುಕಿಗೆ, ಭಾಗ್ಯದ ಬೆಳೆಕಾಯ್ತು
ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಇ ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ
ಹಸಿವು ಎಂದ ಕೂಡಲೇ ಬಿದ್ದೋನ್ಗೆ ಬೆಳೆಯುಯೆಂದಳು
ಧಣಿವು ಎಂದ ಕೂಡಲೇ ಬೆವರಲ್ಲೇ ದೇವರುಯೆಂದಳೂ
ನಿನ್ನಾ ನೆರಳಾ ಸೊಕಿಯೇ ಹೊಸಹೊಸ ನಂಬಿಕೆ ಹುಟ್ಟಿತು
ಹೆಜ್ಜೆಯ ಹಿಂಬಾಲಿಸಿದರೆ ಹೊಸದೊಂದು ಲೊಕವೇ ಕಂಡಿತು
ನಿನ್ನ ಭರಸವೆ ಮೇಲೆ ಇ ನನ್ನ ಬಾಳಿನ ಪಯಣ
ನನ್ನ ನಾಳೆಯ ಹಾಡಿಗೆಯೆಂದು ನೀತಾನೆ ಪಲ್ಲವಿ ಚರಣ
ನಾ ಕಾಡಿನ ಕಲ್ಲಿನ ಹಾಗೆ ನೀ ಕೆತ್ತಿದ ಶಿಲ್ಪಿಯ ಹಾಗೆ
ಮಲಗಿದ್ದ ಆತ್ಮ ಸ್ತೈರ್ಯ ಬಡಿದೆಬ್ಬಿಸಿ ತಂದೆ ಹೊರಗೆ
ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಇ ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ
ಒಂಟಿ ಜೀವಕೆ ಜಂಟಿಯಾದಳು ಪ್ರೀತಿ ಗೆಳತಿ
ನನ್ನ ಕನಸುಗಳಿಗೆ ಕಚಕುಳಿಯಿಟ್ಟು ಕುಣಿಯೋರೀತಿ
ನಿನ್ನಾ ನಗುವಿನ ಮಳೆಯಲಿ ಮನಸು ಮೆಲ್ಲ ನೆನೆದಿದೆ
ಮಂಜಿನ ಶೀತಲ ನೋಟಕೆ ಕಣ್ಣರೆಪ್ಪೆಯು ಕವನ ಬರೆದಿದೆ
ಕಾಲವೊಂದು ಕನ್ನಡಿ ಸಾಧನೆಯೇ ತೂಗುವ ತಕ್ಕಡಿ
ಮುಂದೇ ಮುಂದೇ ನಡಿನಡಿ... ಬರಿಬೇಕು ಭವಿಷ್ಯದ ಮುನ್ನುಡಿ
ಈ ಸ್ನೇಹದ ಅಮೃತ ಕುಡಿದು ಸಾಧಿಸುವೆ ತುಡಿದು ತುಡಿದು
ಗುರಿಯಿಟ್ಟ ಕಡೆಯೆ ನಡೆದು ಗೆಲ್ಲುವಾ ಚಲವು ನನ್ನದು
ಹೇಗೋ ಇದ್ದವ ಹೇಗೋ ಬದಲಾಗುವುದೆ ಇಲ್ಲಿಯ ನಿಯಮ
ಆ ಇಂದ್ರ ಚಂದ್ರರೇ ಬರಲಿ ಬದಲಾಗದು ಸ್ನೇಹದ ಧರ್ಮ
ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಇ ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ
ಒಂಟಿ ಜೀವಕೆ ಜಂಟಿಯಾದಳು ಪ್ರೀತಿ ಗೆಳತಿ
ನನ್ನ ಕನಸುಗಳಿಗೆ ಕಚಕುಳಿಯಿಟ್ಟು ಕುಣಿಯೋರೀತಿ
ಗೆಳತಿ ನಿನ್ನಜೊತೆಯಲಿ ಇ ಹೃದಯ ಹರಳೋಯ್ತು
ನಿನ್ನ ಸ್ನೇಹವೆ ನನ್ನ ಬದುಕಿಗೆ ಭಾಗ್ಯದ ಬೆಳೆಕಾಯ್ತು
ಕಿಲ ಕಿಲ ನಗೆಯ ಜುಳು ಜುಳು ನಗೆಯ ಕೊಟ್ಟಳು ಗೆಳತಿ
ಇ ಮನಸಿನ ಕಿಟಕಿಲಿ ತಂಗಾಳಿನ ಚೆಲ್ಲೋ ರೀತಿ
NANNAVALU NANNAVALU NANAGILLA
ಸಾಹಿತ್ಯ : ಕೆ. ಕಲ್ಯಾಣ್
ಸಂಗೀತ: ಭರದ್ವಾಜ್
ಗಾಯನ: ರಾಜೇಶ್ ಕೃಷ್ಣನ್
ನನ್ನವಳು ನನ್ನವಳು ನನಗಿಲ್ಲ
ನಂಬಿಕೊಂಡ ಪ್ರೀತಿಯೊಂದು ಜೊತೆ ಇಲ್ಲ
ಆಸೆ ಇಂದ ಕಾಣುತಿದ್ದ ಕನಸುಗಳು
ಅತ್ತು ಅತ್ತು ಕಣ್ಣೀರಾಗಿ ಕರಗಿತಲ್ಲ
ತಾಯಿ ತಂದೆ ಮಾತಿಗೆ ನನ್ನ ಮರೆತು
ಪ್ರೀತಿಯ ಕಾಲ್ಕಸವಾಗಿ ಎಸದು
ದೂರ ತಳ್ಳಿ ಹೊದವಳೆ
ನಿನ್ನ ಹಾಗೆ ನಾನು ಹೇಗಿರಲೆ
ಕೈಯ ಮುಗಿವೆ ನನ್ನ ಮರೆಯದಿರು
ಕಾರಣ ನೀನೆ ನನ್ನುಸಿರು
ನನ್ನವಳು ನನ್ನವಳು ನನಗಿಲ್ಲ
ನಂಬಿಕೊಂಡ ಪ್ರೀತಿಯೊಂದು ಜೊತೆ ಇಲ್ಲ
ಆಸೆ ಇಂದ ಕಾಣುತಿದ್ದ ಕನಸುಗಳು
ಅತ್ತು ಅತ್ತು ಕಣ್ಣೀರಾಗಿ ಕರಗಿತಲ್ಲ
ಬಾಳು ಎಂಬ ಪುಸ್ತಕದ ಪುಟ ತೆರೆದು
ಮನಸಾರೆ ಪ್ರೀತಿಯನ್ನು ಪದ ಬರೆದೆ
ಗೀಚಿದಂತ ಲೇಖನಿ ಕಣ್ಣು ಕುಕ್ಕಿತು
ಮೇಣದಲ್ಲಿ ಮನೆ ಕಟ್ಟಿ ದೀಪ ಹಚ್ಚಿದೆ
ಆ ಪ್ರೀತಿ ಬೆಳಕಲ್ಲಿ ಕಣ್ಣು ಮುಚ್ಚಿದೆ
ರೆಪ್ಪೆ ತೆರೆಯ ಮುಂಚೆ ಎಲ್ಲ ಸುಟ್ಟು ಹೊಯಿತೆ
ನಿಂತಿರೊ ಕಡೆಯೆ ಬೂಕಂಪ್ಪ ಇಲ್ಲಿ ಯಾರಿಗೆ ಬೇಕೊ ಅನುಕಂಪ್ಪ
ಸಾವಿರ ಸಿಡಿಲ ನಡುವಲ್ಲು ಬೆಳದಿಂಗಳ ಹುಡುಕೊದೆಶಾಪ
ಪ್ರೀತಿಗೆ ಎಂದಿಗು ಸೋಲಿಲ್ಲ ಅನ್ನೊ ಗಾದೆಯು ತಪ್ಪಾಗಿ ಹೊಯ್ತಲ್ಲ
ನಾನೆ ನನಗೆ ಬೇಕಿಲ್ಲ
ಕಾರಣ ಪ್ರೀತಿಗೆ ಕಣ್ಣಿಲ್ಲ
ನನ್ನವಳು ನನ್ನವಳು ನನಗಿಲ್ಲ
ನಂಬಿಕೊಂಡ ಪ್ರೀತಿಯೊಂದು ಜೊತೆ ಇಲ್ಲ
ಆಸೆ ಇಂದ ಕಾಣುತಿದ್ದ ಕನಸುಗಳು
ಅತ್ತು ಅತ್ತು ಕಣ್ಣೀರಾಗಿ ಕರಗಿತಲ್ಲ
ತಾಯಿ ತಂದೆ ಮಾತಿಗೆ ನನ್ನ ಮರೆತು
ಪ್ರೀತಿಯ ಕಾಲ್ಕಸವಾಗಿ ಎಸದು
ದೂರ ತಳ್ಳಿ ಹೊದವಳೆ
ನಿನ್ನ ಹಾಗೆ ನಾನು ಹೇಗಿರಲೆ
ಕೈಯ ಮುಗಿವೆ ನನ್ನ ಮರೆಯದಿರು
ಕಾರಣ ನೀನೆ ನನ್ನುಸಿರು
SAVI SAVI NENAPU SAAVIRA NENAPU
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ಭಾರಧ್ವಾಜ್
ಗಾಯನ: ಹರಿಹರನ್
ಆ|| ಊ|| ಆ||
ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಸವೆಯದ ನೆನಪು
ಎದೆಯಾಳದಲಿ ಬಚ್ಚಿಕೋಡಿರುವ ಅಚ್ಚಲಿಯದ ನೂರೊಂದು ನೆನಪು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಎದೆಯಾಳದಲಿ ಬಚ್ಚಿಕೋಡಿರುವ ಅಚ್ಚಲಿಯದ ನೂರೊಂದು ನೆನಪು
ಏನೊ ಒಂದು ತೊರೆದ ಹಾಗೆ ..
ಯಾವುದೊ ಒಂದು ಪಡೆದ ಹಾಗೆ ..
ಅಮ್ಮನು ಮಡಿಲ ಅಪ್ಪಿದಹಾಗೆ ..
ಕಣ್ಣಂಚಲ್ಲೀ .... ಕಣ್ಣೀರ ನೆನಪು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಮೊದಮೊದಲ್ ಹಿಡಿದ ಬಣ್ಣಡ ಚಿಟ್ಟೆ
ಮೊದಮೊದಲ್ ಕದ್ದ ಜಾತ್ರೆಯ ವಾಚು
ಮೊದಮೊದಲ್ ಸೇದಿದ ಗಣೇಶ ಬೀಡಿ....
ಮೊದಮೊದಲ್ ಕೂಡಿಟ್ಟ ಹುಂಡಿಯ ಕಾಸು
ಮೊದಮೊದಲ್ ಕಂಡ ಟೂರಿನ್ ಸಿನಿಮಾ
ಮೊದಮೊದಲ್ ಗೆದ್ದ ಕಬಡ್ಡಿ ಆಟ....
ಮೊದಮೊದಲ್ ಇದ್ದ ಹಳ್ಳಿಯ ಗರಿಮನೆ
ಮೊದಮೊದಲ್ ತಿಂದ ಕೈ ತುತ್ತೂಟ
ಮೊದಮೊದಲ್ ಆಡಿದ ಚುಕುಬುಕು ಪಯಣ
ಮೊದಮೊದಲ್ ಅಲಿಸಿದ ಗೆಳೆಯನ ಮರಣ
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಮೊದಮೊದಲ್ ಕಲಿತ ಅರೆ ಬರೆ ಈಜು,
ಮೊದಮೊದಲ್ ಕೊಂಡ ಹೀರೊ ಸೈಕಲ್
ಮೊದಮೊದಲ್ ಕಲಿಸಿದ ಕಮಲಾ ಟೀಚರ್...
ಮೊದಮೊದಲ್ ತಿಂದ ಅಪ್ಪನ ಏಟು,
ಮೊದಮೊದಲ್ ಆದ ಮೊಣಕೈ ಗಾಯ
ಮೊದಮೊದಲ್ ತೆಗೆಸಿದ ಕಲರ್ ಕಲರ್ ಪೋಟೊ...
ಮೊದಮೊದಲಾಗಿ.. ಚಿಗುರಿದ ಮೀಸೆ..
ಮೊದಮೊದಲಾಗಿ.. ಮೆಚ್ಚಿದ ಹೃದಯ
ಮೊದಮೊದಲ್ ಬರೆದ ಪ್ರೇಮದ ಪತ್ರ
ಮೊದಮೊದಲಾಗಿ.. ಪಡೆದ ಮುತ್ತು.. ಮುತ್ತು.. ಮುತ್ತು..
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
Thanks for the beautiful evergreen song
ReplyDelete