The movie Starring Shakar nag was a Big Hit at that time, n the songs were Rocing as still They are Popular, Such a Comoser Hamsa Is.
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ
ಗಾಯನ : ಕೆ .ಜೆ. ಯೇಸುದಾಸ್, ಚಂದ್ರಿಕಾ ಗುರುರಾಜ್
[ಹೆಣ್ಣು]
ಉಳ್. ಳ್ ಳ್ ಳ್... ಆಯಿ ಆಯಿ.....
ಮೇಲೆ ನೋಡೊ ಕಂದ
ಚಂದಮಾಮ ನಗ್ತಾನೆ
ಕಣ್ಣು ಮುಚ್ಚೊ ಕಂದ
ನಿದ್ದೆ ಗುಮ್ಮ ಬರ್ತಾನೆ
ಉಳ್.. ಳ್ ಳ್ ಳ್.... ಆಯಿ ಆಯಿ.....
[ಗಂಡು]
ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ|
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ
ಸತ್ತರೆ ಹೊದ್ದಿಸೋರಿಲ್ಲ |
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿ ಹೋಯ್ತು
ಈ ಮನಸೇ ಕಲ್ಲಾಗಿ ಹೋಯ್ತು ||
ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೂ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನವಾದೆ ನಾ..
ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ..
ತಿಂದೋರು ಎಲೆಯ ಬಿಸಾಡೋ ಹಾಗೆ
ಹೆತ್ತೋಳು ನನ್ನ ಎಸೆದಾಯ್ತು
ಸತ್ತೋರ ಎಡೆಯ ಕಾಗೆಗೆ ಇರಿಸಿ
ಹೆತ್ತೋರ ಕೂಗಿ ಕರೆದಾಯ್ತು
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲ
ಕೇಳೋ ದೇವನೇ || ೧||
ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ
ನನ್ನನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
ನಾನು ಏನು ಪಾಪ ಮಾಡಿದೆ?
ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ
ತಾಯಿ ಹಾಲು ಎಲ್ಲಿ? ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹ ಮಾಡಿದೆ?
ಭೂಮಿಯ ತುಂಬ ಅನಾಥರೆಂಬ
ಕೋಟ್ಯಾನುಕೋಟಿ ಕೂಗು ಇದೆ
ಗ್ರಾಚಾರ ಬರೆಯೋ ಓ ಬ್ರಹ್ಮ ನಿನಗೆ
ಎಂದೆಂದೂ ಅವರ ಶಾಪ ಇದೆ
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲ
ಹೇಳೋ ದೇವನೇ ||೨||
No comments:
Post a Comment