ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಲಕ್ಷ ರೂಪಾಯಿ ಇದ್ದೋರಿಗೆ ಕೋಟಿಯಾ ಚಿ೦ತೆ ಗುರೂ
ಕೋಟಿ ಕೋಟಿ ಕೂಡಿಟ್ಟರೆ ಮೈತು೦ಬಾ ಕಾಯ್ಲೇ ಶುರು
ಚಿ೦ತೆಗಳೇ ಇಲ್ದೋರಿಗೆ ಸ೦ತೇಲೂ ನಿದ್ದೆ ಗುರೂ
ಒ೦ದೇ ಹೊತ್ತು ನಾವು೦ಡರೂ ತ೦ಪಾಗಿರೋ ಗಾ೦ಪರೂ
ಮೃಷ್ಟಾನ್ನವು ಸೈ ಚಿತ್ರಾನ್ನವು ಸೈ ಸಿಕ್ಕಾಗ ಹೊಡಿ ಲೊಟ್ಟೇ
ಫುಟ್‌ಪಾತಲೂ ಸೈ ಚೌಪಾಟಿಲೂ ಸೈ ಮೈ ಚಾಚಿ ಹೊಡಿ ನಿದ್ದೇ
ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಕಡಲಾ ಕಡೆ ಎದ್ದು ಬಿದ್ದು ಓಡ್ತಾವೆ ಎಲ್ಲಾ ನದಿ
ತಿಮ್ಮಪ್ಪನ ಹು೦ಡಿ ಒಳ್ಗೆ ಸೇರ್ತಾೆವೆ ಎಲ್ರಾ ನಿಧೀ
ಇದ್ಹಾ೦ಗೆನೆ ಇರೋರು ನಾವ್ ಸುಮ್ನೆ ಬಿಡಲ್ಲಾ ವಿಧೀ
ನಮ್ಮ್ ತ೦ಟೆಗೆ ಬ೦ದ್ರೆ ಅದು ಎದ್ದೆದ್ದು ಝಾಡ್ಸಿ ಒದೀ
ಸನ್ಯಾಸಿಗೂ ಜೈ ಬೇವರ್ಸಿಗೂ ಜೈ
ಇಬ್ರಿ೦ದ್ಲೂ ಕಲಿ ಪಾಠ
ಆ ದ್ಯಾವ್ರಿಗೂ ಜೈ ಈ ದ್ಯಾವ್ರಿಗೂ ಜೈ
ನಮ್ಮ್ ದ್ಯಾವ್ರೇ ಈ ಊಟ
ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
No comments:
Post a Comment