ಚಿತ್ರ : ಜಸ್ಟ್ ಮಾತ್ ಮಾತಲ್ಲಿ
ಸಾಹಿತ್ಯ : ಮನೋಜವ ಗಲಗಲಿ
ಸಂಗೀತ ಮತ್ತು ಗಾಯನ : ರಘು ದೀಕ್ಷಿತ್
ಬಾನಿನ ಹನಿಯು ಧರೆಯಿಂದ ಪುಟಿದು
ಕಾರಂಜಿ ಭುವಿ ಸೇರಿದೆ..
ಸೋತ ಹೃದಯ ನಾಕಂಡ ಕನಸು
ನಿಜವೆಂದು ನಗೆಬೀರಿದೆ..
ಬಯಕೆ ಮರೆವೆ, ಹೃದಯ ಕಡಿವೆ,
ಇದು ಕಹಿಯೊ ಸಿಹಿಯೊ, ಕಣ್ ಹನಿಯೊ ಅರಿವೊ
ಇದು ನನ್ನ ಹಸಿರು ಕವನ...
ಜಸ್ಟ್ ಮಾತ್ ಮಾತಲ್ಲಿ... she stole my heart away...
ಜಸ್ಟ್ ಮಾತ್ ಮಾತಲ್ಲಿ... she took my breath away...
ಸುರಿವ ಮಳೆ ನಿಂತು, ತಂಪಾಗಿದೆ
ಬರಿದಾದ ಭುವಿ ಮತ್ತೆ, ಹಸಿರಾಗಿದೆ
ಗೂಡ ಬಿಡಲು ಹಕ್ಕಿಯು ಹಾತೊರೆದಿದೆ
ತನ್ನ ನೆನೆದ ರೆಕ್ಕೆಯ ಬಾನಿಗೊಡ್ಡಿದೆ
ಸೋತ ಈ ಸಮಯ ಹಾಡಾಗಿದೆ...
ಇದು ಕಹಿಯೊ ಸಿಹಿಯೊ, ಕಣ್ ಹನಿಯೊ ಅರಿವೊ
ಇದು ನನ್ನ ಹಸಿರು ಕವನ...
ಜಸ್ಟ್ ಮಾತ್ ಮಾತಲ್ಲಿ... she stole my heart away...
ಜಸ್ಟ್ ಮಾತ್ ಮಾತಲ್ಲಿ... she took my breath away...
thanks for the lyrics :)
ReplyDeleteAwsme song !!!!!! thnxx 4 the lyrics.....!! :)
ReplyDelete