ಚಿತ್ರ : ಗೋಕುಲ
ವರ್ಷ : ೨೦೦೯
ಸಂಗೀತ : ಮನೋಮೂರ್ತಿ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಗಾಯಕರು : ಸೋನು ನಿಗಮ್, ಶ್ರೇಯಾ ಘೋಷಾಲ್
ಆರಾಮಾಗೆ ಇದ್ದೆ ನಾನು
ನಿನ್ನ ಕಂಡು, ಅರೆ ಏನಾಯಿತು
ಅರೆ ಏನಾಯಿತು, ಅಲೆ ಜೋರಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೆ, ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು... || ಆರಾಮಾಗೆ || || 2||
ನೆನೆಯುತ, ಬರೆದೆ ನೆನೆಯುತ
ಮನ ಇನ್ನೂನು ಭಾವುಕವಾಯಿತು..
ಬಯಸುತ, ಒಲವ ಬಯಸುತ
ಕ್ಷಣ ಒಂದೊಂದು ರೋಚಕವಾಯಿತು..
ನಾನು ನೀನು ಕೂತುಕೊಂಡ ಜಾಗ
ನಮ್ಮ ಮಾತೆ .. ಆಡುತಾವೆ ಈಗ..
ಪಿಸುಮಾತಾಡುತ, ಅರೆ ಏನಾಯಿತು
ಸವಿ ಕನಸೊಂದು ಜೀವಂತವಾಯಿತು... || ಆರಾಮಾಗೆ ||
ಮರೆಯಿತು, ಹೆಸರೆ ಮರೆಯಿತು
ಈ ಮುದ್ದಾದ ಮೋರೆಯ ನೋಡುತ..
ಹೊರಟಿತು, ಹೃದಯ ಹೊರಟಿತು
ನೀನಿದ್ದಲ್ಲೇ ಡೇರೆಯ ಹೂಡುತ..
ಕಾಣದಂತೆ ಓಡಿಬಂದೆಯೇನು
ಕಾಡಿದಷ್ಟು ಪ್ರೀತಿ ಚೆಂದವೇನು
ಜೊತೆ ಒಡಾಡುತ, ಅರೆ ಏನಾಯಿತು
ಈ ಬಡಜೀವ ಶ್ರೀಮಂತವಾಯಿತು... || ಆರಾಮಾಗೆ ||
No comments:
Post a Comment