ಚಿತ್ರ - ಆಪ್ತ ರಕ್ಷಕ
ಸಾಹಿತ್ಯ - ಕವಿರಾಜ್
ಸಂಗೀತ - ಗುರುಕಿರಣ್
ಗಾಯಕ - ಡಾ| ಎಸ್.ಪಿ.ಬಾಲಸುಬ್ರಮಣ್ಯಂ
ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ
ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ
ಪ್ರೀತ್ಸೋದು ಎಂದೂ ನಿಮ್ಮನ್ನೇ
ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ
ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ
ಯಾರನ್ನೂ ನೋಯಿಸಬೇಡ , ಮೋಸವಾ ಮಾಡಲೇಬೇಡ
ನಿನ್ನಾಗ ಕಾಯುತ್ತಾನೆ ತಾನೇ ಭಗವಂತ
ಬಿಟ್ಟರೆ ನಿನ್ನ ಸ್ವಾರ್ಥ , ಎಲ್ಲರೂ ನಿಂಗೆ ಸ್ವಂತ
ಒಂದಾಗಿ ಬಾಳು ಎಂದೂ ಹಂಚಿ ತಿನ್ನುತಾ
ಉಪ್ಪನ್ನು ತಿಂದ ಮೇಲೆ ನೀರನ್ನ ಕುಡಿಲೇಬೇಕು
ತಪ್ಪನ್ನ ಮಾಡೋರೆಲ್ಲಾ ದಂಡಾನಾ ತೆರಲೇಬೇಕು
ಭೂಮಿಯೇ ಒಂದು ಊರು , ಎಲ್ಲಕೂ ಬಾನೇ ಸೂರು
ನಡುವಲ್ಲಿ ಬಾಳೋ ಮಂದಿ , ಎಲ್ಲಾ ನಮ್ಮೋರು
ಎತ್ತರಾ ಎಷ್ಟೇ ಏರು , ಮಣ್ಣಲ್ಲಿ ಇರಲಿ ಬೇರು
ನೋಡದೆ ಅವರು ಇವರು , ವಿನಯವ ನೀ ತೋರು
ಈ ಬಾಳು ಬೇವು ಬೆಲ್ಲಾ , ಎಲ್ಲಾನೂ ನೀ ಸವಿಬೇಕು
ಅಂದಂತೆ ಆಗೋದಿಲ್ಲಾ ಬಂದಂತೇ ನೀನಿರಬೇಕು
No comments:
Post a Comment