ಚಿತ್ರ: ಮೃಗಾಲಯ
ಗಾಯಕ: ಎಸ್.ಪಿ.ಬಿ
ಸಾಹಿತ್ಯ:
ಸಂಗೀತ:
ವರ್ಷ:
ಆಲಯ ಮೃಗಾಲಯ ಬಾನಾಡಿಗಳ ನಿಲಯ
ಮನದಲ್ಲಿ ಆ ಚೈತ್ರ ತರುವ ಈ ಕಣ್ಗಳಿಗೆ ಆನಂದ ಕೊಡುವ
ನೂರಾರು ಜೀವಿಯ
ಆಲಯ ಮೃಗಾಲಯ ಬಾನಾಡಿಗಳ ನಿಲಯ
ಆನೆ ಸಿಂಹ ಚಿರತೆಯ ಒಂಟೆ ಹುಲಿ ಕರಡಿಯ
ಆನೆ ಸಿಂಹ ಚಿರತೆಯ ಒಂಟೆ ಹುಲಿ ಕರಡಿಯ
ಭಯವಿಲ್ಲದೇ ನೀನೋಡುವೆ ಕಣ್ಬಲೆಯಲೆ ಸೆರೆಹಾಕುವೆ
ಮಂಗನಿಂದ ಮಾನವ ಬಂದನೆಂಬ ಸತ್ಯವ
ಕಣ್ಣೆದುರಲೇ ನೀ ಕಾಣುವೆ ಆ ಸೃಷ್ಟಿಗೆ ಕೈಮುಗಿಯುವೆ
ಕಾಡಲ್ಲೆ ಇರುವಂತೆ ಪಡುವೆ ಭ್ರಮೆಯ ಭಮೆಯ ಭಮೆಯ
ಆಲಯ ಮೃಗಾಲಯ ಆಲಯ ಮೃಗಾಲಯ ಬಾನಾಡಿಗಳ ನಿಲಯ
ಕುಣಿವ ನವಿಲ ನೋಡಲು ಗಿಳಿಯ ನುಡಿಯ ಕೇಳಲು
ಕುಣಿವ ನವಿಲ ನೋಡಲು ಗಿಳಿಯ ನುಡಿಯ ಕೇಳಲು
ಆ ಬ್ರಹ್ಮನ ಚಾತುರ್ಯಕೆ ಬೆರಗಾಗುವೆ ಮರುಳಾಗುವೆ
ಪಕ್ಷಿ ಪ್ರಾಣಿ ಆಗಲಿ ವಿಷದ ಹಾವೆ ಆಗಲಿ
ನಮ್ಮಂತೆಯೇ ಸಂತೋಷದಿ ಬಾಳಿಬದುಕಲು ಹೇಗೆ ಬಂದಿದೆ
ದಯೆಯಿಂದ ಕಂಡಾಗ ನಿಜವ ಅರಿವೆ ಗೆಳೆಯ ಗೆಳೆಯ
ಆಲಯ ಮೃಗಾಲಯ ಆಲಯ ಮೃಗಾಲಯ ಬಾನಾಡಿಗಳ ನಿಲಯ
ಮನದಲ್ಲಿ ಆ ಚೈತ್ರ ತರುವ ಈ ಕಣ್ಗಳಿಗೆ ಆನಂದ ಕೊಡುವ
ನೂರಾರು ಜೀವಿಯ
No comments:
Post a Comment