ಸಾಹಿತ್ಯ, ಸಂಗೀತ: ಹಂಸಲೇಖ
ಗಾಯನ: ಕೆ. ಜೆ. ಯೇಸುದಾಸ್
ಯಾರಿಗೆ ಬೇಕು ಈ ಲೋಕ.. ll ಪ. ll
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯೂ ಇದ್ದರೂ ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ... ll ಅ.ಪ. ll
ಮಕ್ಕಳನ್ನೇ ಜೂಜಲ್ಲಿ ಇಡುವಾಗ, ನೋಡಿಕೊಂಡು ಇರಬೇಕಾ?
ಯುಧ್ಧವನ್ನು ಗೆಲ್ಲೋಕ್ಕೆ ಬಲ್ಲವನು, ಕೈಕಟ್ಟಿ ಕೂರಬೇಕಾ?
ನಾರಿಯೇ ಕಾಂಚನ, ಕೌರವರ ಮೋಜಿಗೆ!
ಧರ್ಮವೇ ಲಾಂಛನ, ಪಾಂಡವರ ಜೂಜಿಗೆ!! ll ೧ ll
ನರಿಗಳು ನ್ಯಾಯಾನ ಹೇಳುವಾಗ, ಕಿವಿಕೊಟ್ಟು ಕೇಳಬೇಕಾ?
ಮೊಸಳೆಯು ಕಣ್ಣೀರು ಇಡುವಾಗ, ಕೂಡಿಕೊಂಡು ಅಳಬೇಕಾ?
ತಡೆದರೂ ಈ ದಿನ, ಮನಸಿನ ನಾಯಕ,
ಬಿಟ್ಟರೆ ಎಲ್ಲರ ಸೀಳುವ ಸೈನಿಕ!! ll ೨ ll
No comments:
Post a Comment