ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ಕೆ.ಕಲ್ಯಾಣ್
ಗಾಯನ : ಕಾರ್ತಿಕ್, ಹರಿಣಿ ಸುಧಾಕರ್
ಹೆಣ್ಣು : ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು : ಮುತ್ತಿನಂತ ನಿನ್ನ ಮಾತು
ಆಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ
ಹೆಣ್ಣು : ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಗಂಡು : ಆ ನನ್ನಾ ಕನಸು ಇಂದು ನಿಜವಾಯ್ತು
ಹೆಣ್ಣು : ಅಂದು ನೀನು ಬಳಿ ಬಂದೆ
ಮನದ ಪ್ರೀತಿ ತಿಳಿ ಅಂದೆ
ನಾನು ನಿನ್ನ ಮನಸನು ಅರಿಯದೆ ಹೋದೆ.ಆ.ಅ
ಗಂಡು : ಇಂದು ನೀನು ಜೊತೆಯಾದೆ
ಎದೆಯ ತುಂಬಿ ಉಸಿರಾದೆ
ನಿನ್ನ ಮಾತು ಕೇಳುತ ಬೆರೆಯುತ ಹೋದೆ.ಹಾ
ಹೆಣ್ಣು : ಅರಳಿದ ತನುವು ಕುಣಿದಿದೆ ಮನವು
ಸೋತು ಹೋದೆನು ಜಾಣ
ಗಂಡು : ಸವೆಯದ ನೆನಪು ಸವಿದರೆ ಸಾಕು
ಹಾರಿ ಹೋಗಲಿ ಪ್ರಾಣ
ಹೆಣ್ಣು : ಕೊನೆವರೆಗೂ ಹೀಗೆ ಪ್ರೇಮಿಗಳ ಹಾಗೆ
ನಡೆಸೋಣ ಬಾಳ ಪಯಣ
ಗಂಡು : ಹೇಯ್.ಎಂದೆಂದು ನಿನಗಾಗಿ
ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ
ಹೆಣ್ಣು : ಆಹಾ..ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು : ಹಾ.ಮುತ್ತಿನಂತ ನಿನ್ನ ಮಾತು
ಅಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಹೆಣ್ಣು : ಯಾರು ಇರದ ಮನಸಿನಲಿ
ಬಂದೆ ನೀನು ಕ್ಷಣದಲ್ಲಿ
ನಿನ್ನ ಒಲವು ಎಂದೂ ಹೀಗೆ ಇರಲಿ
ಗಂಡು : ನೀನು ಇರದ ಬಾಳಿನಲಿ
ಹೇಗೆ ತಾನೆ ನಾನಿರಲಿ
ನಿನ್ನ ಸನಿಹ ಎಂದೂ ಹೀಗೆ ಇರಲಿ
ಹೆಣ್ಣು : ಹಾ.ಮನಸಿನ ತೆರೆಯ ಸರಿಸಿದೆ ಗೆಳೆಯ
ಸೋತು ಹೋಯಿತು ಹೃದಯ
ಗಂಡು : ಕನಸಿನ ವಿಷಯ ಹೇಳುವ ಸಮಯ
ಹಾಡು ಅಂತು ಈ ಹರೆಯ
ಹೆಣ್ಣು : ನಿನ್ನಿಂದ ನಾನು ನಿನಗಾಗಿ ನಾನು
ನಿನ್ನವಳೆ ನಾನು ಗೆಳೆಯ
ಗಂಡು : ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ
ಹೆಣ್ಣು : ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಗಂಡು : ಹಾ..ಮುತ್ತಿನಂತ ನಿನ್ನ ಮಾತು
ಅಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಇಬ್ಬರೂ : ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹಾ.ಪ್ರೀತಿಗೆ ಹೆಸರಾಗಿ
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ.ಹೋಯ್.
No comments:
Post a Comment