ಒಂದೇ ಬಾರಿ ನನ್ನ ನೋಡಿ
ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ,
ಹಿಂದ ನೋಡದ ಗೆಳತಿ ಹಿಂದ ನೋಡದ
ಗಾಳಿ ಹೆಚ್ಚಿ ಹಿಡದ ಸುಗಂಧ
ಅತ್ತ ಅತ್ತ ಹೋಗುವಂದ
ಹೋತ ಮನಸು ಅವನ ಹಿಂದ,
ಹಿಂದ ನೋಡದ ಗೆಳತಿ ಹಿಂದ ನೋಡದ
ನಂದ ನನಗ ಎಚ್ಚರಿಲ್ಲ
ಮಂದಿ ಗೊಡವಿ ಏನ ನನಗ
ಒಂದಿ ಅಳತಿ ನಡೆದದ ಚಿತ್ತ
ಹಿಂದ ನೋಡದ ಗೆಳತಿ ಹಿಂದ ನೋಡದ
ಸೂಜಿ ಹಿಂದ ದಾರದ್ಹಾಂಗ,
ಕೊಳ್ಳದೊಳಗ ಜಾರಿದ್ಹಾಂಗ
ಹೋತ ಹಿಂದ ಬಾರದ್ಹಾಂಗ
ಹಿಂದ ನೋಡದ ಗೆಳತಿ ಹಿಂದ ನೋಡದ
ಒಂದೇ
No comments:
Post a Comment