ಆ ಆ ಆ ಆ .........
ಏಳು ಜನ್ಮ ಇದ್ದರೆ
ಹೆಣ್ಣಾಗಿ ಹುಟ್ಟಿದರೆ ||೨||
ಶಿವನನ್ನು ಕೇಳೋದು ಒಂದೇ
ಪತಿದೇವ ನೀನಾಗು ಎಂದೇ
ಏಳು ಜನ್ಮ ಇದ್ದರೆ
ಗಂಡಾಗಿ ಹುಟ್ಟಿದರೆ
ಶಿವನನ್ನು ಕೇಳೋದು
ಧರ್ಮ ಪತ್ನಿ ನೀನಾಗು ಎಂದೇ
ಆ ಆ ಆ ಆ .........
ನೀನು ಜೊತೆಯಲ್ಲಿದ್ದರೆ
ಭೂಮಿ ಸ್ವರ್ಗ ಓ ದೊರೆ ||೨||
ನಿನ್ನ ಪಡೆದ ನಾನೆಷ್ಟು ಧನ್ಯ..
ನೀನಿರದ ಈ ಲೋಕ ಶೂನ್ಯ
ನೀನು ಬಳಿಗೆ ಬಂದರೆ
ಪ್ರೀತಿ ಮಾತನಾಡಿದರೆ
ನಾಕಂಡೆ ದೇವಿಯ ರೂಪ
ನನ್ನ ಬಾಳಿನಾ ನಂದಾ ದೀಪ ..
ಆ ಆ ಆ ಆ ಆ ಆ ಆ......
ನನಗೆ ಸಾವು ಬಂದರೆ
ಏನಿಲ್ಲ ತೊಂದರೆ
ನಿನ್ನ ಮುಂದೆ ಈ ಪ್ರಾಣ ಹೋಗಲಿ..
ಮುತ್ತೈದೆ ಭಾಗ್ಯ ನನಗೆ ದೊರಕಲಿ
ನೀನು ಇರದ ಜನ್ಮ
ನನಗೇಕೆ ಬೇಕು ಬ್ರಹ್ಮ
ಜೊತೆಯಲ್ಲೇ ಈಪ್ರಾನ ಹೋಗಲಿ
ಜೊತೆಯಲ್ಲೇ ಈಪ್ರಾನ ಹೋಗಲಿ
ಸ್ವರ್ಗದಲ್ಲೇ ನಮ್ಮ ಮಿಲನವಾಗಲಿ
ಆ ಆ ಆ ಆ ಆ ಆ.....
ಆ ಆ ಆ ಆ ಆ ಆ ....
No comments:
Post a Comment