ಹುಡುಗಿ ಹುಡುಗಿ ನಿನ್ನ ಕಂಡಾಗ,
ನನ್ನೇ ಮರೆತೇ ನಾನೀಗ,
ಮನಸು ಮನುಸು ಮೆಚ್ಚಿಕೊಂಡಾಗ,
ನಾನೇ ಇಲ್ಲ ನನಗೀಗ,
ನೀನು ಬಳುಕಿ ನಡೆಯುವಾಗ, ಮೂಡ ಮಳೆಯು ಆಯಿತಿಗ,
ನೀನು ನಕ್ಕು ನಲಿಯುವಾಗ, ಕಲ್ಲು ಶಿಲೆಗಳಾಯ್ತು ಈಗ,
ನಿನ್ನಾಣೆ ಪ್ರಾಣ ಕೊಟ್ಟು ಪ್ರೀತಿ ಮಾಡುವೆ, ಪ್ರೀತ್ಸೆ........
ತುಟಿಯಲ್ಲಿ ಇ ಸ್ಮೈಲು ಕಂಡ ಕೂಡಲೇ,
ಎದ್ಹೆಯಲ್ಲಿ ಪ್ರೀತಿಯ ಚಿಲುಮೆ ಚಿಮ್ಮಿತು,
ಕಣ್ಣಲ್ಲಿ ಸಿಹಿ ಲುಕ್ಕು ಕೊಟ್ಟ ಕೂಡಲೇ,
ಮನಸೆಲ್ಲೋ ಗರಿ ಬಿಚ್ಚಿ ಹಾರಿ ಹೋಯಿತು,
ನೀ ನಡೆಯೋ ದಾರಿಯೆಲ್ಲ ಹದಿನೇಳು ಚೈತ್ರ್ಯವಾಯ್ತು,
ನೀ ಹಾಡೋ ಹಾಡಿನಿಂದ ಕವಿಗಳಿಗೆ ಉಸಿರು ಬಂತು,
ನಿನ್ನ ಮೌನ ನೋಡಿ ತಾನೆ ಗಾಳಿ ಹಾಡ ಹಾಡಿತು,
ನಿನ್ನ ಮಾತು ಕೇಳಿದೊಡನೆ ಕೋಗಿಲೆ ಕುಹೂ ಕಲಿಯಿತು,
ಪ್ರೀತಿನ ಪ್ರೀತಿಯಿಂದ ಪ್ರೀತಿ ಮಾಡುವೆ ಪ್ರೀತ್ಸೆ........
ಹುಡುಗಿ ಹುಡುಗಿ ನಿನ್ನ ಕಂಡಾಗ,
ನನ್ನೇ ಮರೆತೇ ನಾನೀಗ,
ಮನಸು ಮನುಸು ಮೆಚ್ಚಿಕೊಂಡಾಗ,
ನಾನೇ ಇಲ್ಲ ನನಗೀಗ.......
ಗಾಳಿಲಿ ನಿನ್ನ ಹೆಸರ ಕರೆದ ಕೂಡಲೇ,
ಹೂವುಗಳು ಮೈ ನೆರೆದ ಕತೆಯು ಹುಟ್ಟಿತೆ,
ಮಳೆಯೊಳಗೆ ನಿನ್ನ ಹಾಡ ನೆನೆದ ಕೂಡಲೇ,
ಚಿಪ್ಪೊಳಗೆ ಮುತ್ತುಗಳ ಹೊಳಪು ಹುಟ್ಟಿತೆ,
ನೀ ಸೂಕೋ ನೆಲದಲೆಲ್ಲ ಚಿಗುರುಗಳ ಹಬ್ಬವಂತೆ,
ನೀ ತಾಕೋ ಕಡೆಯಲೆಲ್ಲ ಇಬ್ಬನಿಯ ದಿಬ್ಬವಂತೆ,
ನಿನ್ನ ಮೊನಾಲಿಸ ನಗೆಯ ನಾ ಕದಿಯೋ ಸಲುವಾಗಿ,
ಪ್ರೀತಿ ತುಂಬಿಕೊಂಡ ಎದೆಯ ನಾ ಸೇರೋ ಕ್ಷಣಕಾಗಿ,
ಮನಸಾರೆ ಸೋತು ಬಂದೆ ಒಮ್ಮೆ ಒಪ್ಪಿಕೊ, ಪ್ರೀತ್ಸೆ.....
ಹುಡುಗಿ ಹುಡುಗಿ ನಿನ್ನ ಕಂಡಾಗ,
ನನ್ನೇ ಮರೆತೇ ನಾನೀಗ,
ಮನಸು ಮನುಸು ಮೆಚ್ಚಿಕೊಂಡಾಗ,
ನಾನೇ ಇಲ್ಲ ನನಗೀಗ.......
ನೀನು ಬಳುಕಿ ನಡೆಯುವಾಗ, ಮೂಡ ಮಳೆಯು ಆಯಿತಿಗ,
ನೀನು ನಕ್ಕು ನಲಿಯುವಾಗ, ಕಲ್ಲು ಶಿಲೆಗಳಾಯ್ತು ಈಗ,
ನಿನ್ನಾಣೆ ಪ್ರಾಣ ಕೊಟ್ಟು ಪ್ರೀತಿ ಮಾಡುವೆ, ಪ್ರೀತ್ಸೆ........
No comments:
Post a Comment