ಚಿತ್ರ: ಕೂಲ್
ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ಕವಿರಾಜ್
ಗಾಯಕ: ಶಾನ್, ಅನುರಾಧ ಭಟ್
ನೀನು ನಿಂತರೆ ಹತ್ತಿರ ಪರಿಸರ ಸುಂದರಾ...
ಬಹಳ ದಿನಗಳ ನಂತರ ಸಡಗರ ಈ ಥರಾ...
ನನ್ನ ಹೆಸರು ಇಷ್ಟು ಇದೆ ಚೆಂದ ಅನಿಸೋದೆ ನಿನ್ನ ದನಿಯಿಂದಾ...
ಬದಲಾದೆ ನಾನು ನೀ ಬಂದ ಆನಂತರಾ...
ನೀನು ನಿಂತರೆ ಹತ್ತಿರ ಪರಿಸರ ಸುಂದರಾ...
ಬಹಳ ದಿನಗಳ ನಂತರ ಸಡಗರ ಈ ಥರಾ...
ನಿನ್ನ ಬೆನ್ನಲೆ ನಾನು ಬರೆಯಲೆ ಒಂದು ಹನಿಗವನ...
ಸರಿ ನಿನ್ನಕಂಗಳ ಕನ್ನಡಿ ಹಿಡಿದೇ ಅದನು ಓದುವೆ ನಾ...
ಹಿತ ಇಂಥಾ ಅನಾಹುತ... ಸಲ್ಲಾಪಕ್ಕೆ ಸುಸ್ವಾಗತಾ...
ಭರವಸೆಗಳು ಯಾಕೇ ನೂರೂ...ಎದೆಗೊರೆಗಿಕೊ ಚೂರೆಚೂರೂ...
ಸತಾಯಿಸು ಸತಾಯಿಸು ವಿನಾಕಾರಣಾ...
ನೀನು ನಿಂತರೆ ಹತ್ತಿರ ಪರಿಸರ ಸುಂದರಾ...
ನನ್ನ ಕೈಗಳ ಅಷ್ಟು ಗೆರೆಗಳ ಮೇಲೆ ನಿನ್ ಹೆಸರೂ...
ಈ ನಿನ್ನ ಪರಿಚಯ ಆದ ಮರುಕ್ಷಣ ನನ್ನ ಬದುಕು ಶುರೂ...
ಇದೇನಿದು ಹೊಸ ಕಥೆ... ಅದೇ ನಿಜ ನಂಗೂ ಮತ್ತೆ...
ನಗುನಗುತಲೆ ನಂಗೇ ನೀನು ಜ್ವರ ಬರಿಸುವೆ ಹೇಗೊ ಏನೋ...
ಇದೋಂತರ ನಿರಂತರ ಸಿಹಿ ಸಂಕಟಾ...
ನೀನು ನಿಂತರೆ ಹತ್ತಿರ ಪರಿಸರ ಸುಂದರಾ...
ಬಹಳ ದಿನಗಳ ನಂತರ ಸಡಗರ ಈ ಥರಾ...
No comments:
Post a Comment