ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಈ ಭಾವ ಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವ ಗೀತೆ ನಿನಗಾಗಿ ಹಾಡಿದೆ || ೨
ಬಳ್ಳಿಯಲಿ ಹೂವು ತುಂಬಿ
ಮರಗಳಲಿ ಜೀವ ತುಂಬಿ
ಎಲ್ಲೆಲಿ ನೋಡಿದರಲ್ಲಿ
ಹೊಸ ಹಸಿರು ತುಂಬಿದೆ
ಮರಗಳಲಿ ಜೀವ ತುಂಬಿ
ಎಲ್ಲೆಲಿ ನೋಡಿದರಲ್ಲಿ
ಹೊಸ ಹಸಿರು ತುಂಬಿದೆ
ಹಾಡುತಿರೆ ದುಂಬಿಗಳೆಲ್ಲ
ಹಾರುತಿರೆ ಹಕ್ಕಿಗಳೆಲ್ಲ
ತೋಳಿಂದ ನನ್ನನು ಬಳಸಿ
ನೀ ಸನಿಹ ನಿಂತಿರೆ
ನಿನ್ನ ಅಂದ ಕಂಡು ಸಂತೋಷಗೊಂಡು ಹೊಸ ಭಾವ ಮೂಡಲು
ಹಾರುತಿರೆ ಹಕ್ಕಿಗಳೆಲ್ಲ
ತೋಳಿಂದ ನನ್ನನು ಬಳಸಿ
ನೀ ಸನಿಹ ನಿಂತಿರೆ
ನಿನ್ನ ಅಂದ ಕಂಡು ಸಂತೋಷಗೊಂಡು ಹೊಸ ಭಾವ ಮೂಡಲು
ಈ ಭಾವ ಗೀತೆ ನಿನಗಾಗಿ ಹಾಡಿದೆ || ೨
ಕಣ್ಣಿನಲಿ ರೂಪ ತುಂಬಿ
ಮನಸಿನಲಿ ಪ್ರೇಮ ತುಂಬಿ
ನನ್ನೆದೆಯ ವೀಣೆಯ ಮೀಟಿ
ಹೊಸ ನಾದ ತುಂಬಿದೆ
ಮನಸಿನಲಿ ಪ್ರೇಮ ತುಂಬಿ
ನನ್ನೆದೆಯ ವೀಣೆಯ ಮೀಟಿ
ಹೊಸ ನಾದ ತುಂಬಿದೆ
ಆಸೆಗಳ ತಂದು ತುಂಬಿ
ಮೋಹವನು ತುಂಬಿ ತುಂಬಿ
ನೂರಾರು ಕನಸುಗಳನ್ನು ಬಾಳಲ್ಲಿ ತುಂಬಿದೆ
ಹೀಗೇಕೆ ಹೀಗೆ ನೀ ಮೌನವಾದೆ ಕಾರಣ ಹೇಳದೆ
ಮೋಹವನು ತುಂಬಿ ತುಂಬಿ
ನೂರಾರು ಕನಸುಗಳನ್ನು ಬಾಳಲ್ಲಿ ತುಂಬಿದೆ
ಹೀಗೇಕೆ ಹೀಗೆ ನೀ ಮೌನವಾದೆ ಕಾರಣ ಹೇಳದೆ
ಈ ಭಾವ ಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
Awesome song ever
ReplyDelete