Tuesday, February 8, 2011

Murali meets Meera (2011) - Baaninda Minchondu Jhillendu nakkaga lyrics

ಚಿತ್ರ: ಮುರಳಿ ಮೀಟ್ಸ್ ಮೀರಾ

ಸಂಗೀತ: ಅಭಿಮನ್ ರಾಯ್

ಗಾಯಕ: ಪಿ. ಕಿರಣ್ ಸಾಗರ್



ಓ ಹೋ...ಓ ಓ ಹೋ...ಓ ಓ ಹೋ...ಓ ಓ ಹೋ...ಓ

ಬಾನಿಂದ ಮಿಂಚೊಂದು ಝಿಲ್ಲೆಂದು ನಕ್ಕಾಗ ಮೋಡ ಮುಗಿಲಾಗಿದೆ

ಮಧುರ ಮಾತೊಂದು ಸನಿಹ ಸೆಳೆದೀಗ ಕನಸು ತೇಲಾಡಿದೆ

ಇಂದೇಕೆ ಹೀಗಿಂದು ಈ ನನ್ನ ಮನಸ್ಸಿಂದು ಖಾಲಿ ಕೊಡವಾಗಿದೆ

ಓ ಒಲವೆ ನೀ ಬಂದು ನನ್ನೆದುರು ನಿಂತಾಗ ತುಂತುರು ಮಳೆಯಾಗಿದೆ

ಮುಂಗಾರು ನಿನ್ನ ಮನ ನಿಂತಲ್ಲೇ ನೀನಾದೆ ನಾ



ಮನದ ಈ ಕೊಳದಲಿ ಹಂಸದಾ ನಡಿಗೆಯು ಮೆಲ್ಲನೆ ಮೂಡಲು ಪ್ರೀತಿಯಾ ಕೊಡುಗೆಯು

ಸದ್ದೆ ಇರದೆ ಹೆಜ್ಜೆಯಲ್ಲಿ ಮೆತ್ತಿ ಮೆಲುಕನ್ನು

ಗೊತ್ತೆ ಇರದ ಹಾಗೆ ಸುಳಿದ ಒಟ್ಟು ಒಲವನ್ನು

ಕಂಗಳಲ್ಲಿ ತುಂಬಿಕೊಂಡು ಕಾದು ನಿನ್ನನ್ನು

ಮಾಯದಂತ ಮೋಹದಲ್ಲಿ ಜಾರಿ ಬಿದ್ದೆನು

ಒಮ್ಮೆಯಾದರು ಬಂದು ಹೋಗು ಒಲವೆ ನನ್ನೆದುರೂ...

ಸುಳ್ಳೆಯಾದರು ಸುಳಿದು ಹೋಗು ಒಲ್ಲೆ ಎನ್ನದಿರೂ...ಊ... ಊ...

ಓ ಹೋ...ಓ ಓ ಹೋ...ಓ ಓ ಹೋ...ಓ ಓ ಹೋ...ಓ



ಕಲ್ಪನಾ ಲೋಕದ ಕುಂಚದಾ ಕಲೆಯಲಿ ಮೂಡಿದಾ ಸುಂದರಾ ಚಿತ್ರದಾ ಚೆಲುವಲೀ

ಅರಳಿ ನಿಂತ ಮುದ್ದು ಮುಖದ ತುಂಟ ನಗುವಲ್ಲಿ

ಮೌನ ಮುರಿದು ಮಾತು ಮಿಡಿದು ಕಾದು ಹೊಸಿಲಲ್ಲಿ

ಕಣ್ಣಿನಲ್ಲಿ ಕಣ್ಣನಿಟ್ಟು ನಿನ್ನ ಬರುವನ್ನು

ದಾರಿಯಲ್ಲಿ ಹಾಸಿ ನನ್ನ ಮುದ್ದು ಕನಸನ್ನೂ..

ಕಾಯ್ದುಕೊಳ್ಳುವ ಮೊದಲೆ ನಿನ್ನಲೆ ಮನಸಾ ಅಡವಿಡುವೇ...

ಇಲ್ಲವಾದರೆ ನಿನ್ನ ಮನಸನು ಸಾಲ ಕೊಡಬಹುದೇ...

ಓ ಹೋ...ಓ ಓ ಹೋ...ಓ ಓ ಹೋ...ಓ



No comments:

Post a Comment