ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್
ಗಾಯನ : ಪುನೀತ್ ರಾಜಕುಮಾರ್, ಸುಚಿತ್ರ
ಸಂಗಡಿಗರು :
ಯಮ್ಮ ಯಮ್ಮ ಯಮ್ಮ
ಯಮ್ಮ ಯಮ್ಮ ಯಮ್ಮ
ಹೆಣ್ಣು :
ಬಾರೋ ಬಾರೋ ಬಾರೋ ಮುದ್ದು ರಾಜ
ಸಿಡಿಗುಂಡು ಆದ್ರು ಮನಸು ಮಾತ್ರ ರೋಜ
ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳೀನ
ದೂರ ದೂರ ಇನ್ನೇಕೆ ನನ್ನಾ ನಿನ್ನಾ ನಡುವೆ
ಬಾರೋ ಬಾರೋ
ಗಂಡು :
ಬಾರೆ ಬಾರೆ ಬಾರೆ ನನ್ನ ಮೈನ
ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈನ
ಚಂದನದ ಗೊಂಬೆಯೆ ಭೂಮಿಗಿಳಿದ ರಂಭೆಯೆ
ನನ್ನ ಮುದ್ದು ಬಂಗಾರಿ ನನ್ನಾ ಮನಸಾ ಕದ್ದಾ
ಚೋರಿ ಚೋರಿ
ಹೆಣ್ಣು :
ಬಾರೋ ಬಾರೋ ಬಾರೋ ಮುದ್ದು ರಾಜ
ಸಿಡಿಗುಂಡು ಆದ್ರು ಮನಸು ಮಾತ್ರ ರೋಜ
ಸಂಗಡಿಗರು :
ಯಮ್ಮ ಯಮ್ಮ ಯಮ್ಮ
ಯಮ್ಮ ಯಮ್ಮ ಯಮ್ಮ
ಯಮ್ಮ ಯಮ್ಮ ಯಮ್ಮ
ಯಮ್ಮ ಯಮ್ಮ ಯಮ್ಮ
ಹೆಣ್ಣು :
ನಿನ್ನ ಕಣ್ಣ ಸನ್ನೆಗೆ ಕರಗಿ ಹೋದೆ ನಾನು
ಹೃದಯ ನೀಡೋ ಮನ್ಮಥ
ಕಟ್ಟುಮಸ್ತು ಹಳ್ಳಿ ಹೈದ ನೀನು ನಿಂಗೆ ನಾನು
ಗಂಡು :
ಮರುಳು ಮಾಡೋ ಮೋಹಿನಿ
ಏನೋ ಜಾದು ಮಾಡಿದೆ
ಅದ್ಯಾವ ಮಂತ್ರ ಹಾಕಿದೆ
ಮಳ್ಳಿ ನಿನ್ನ ಹಿಂದೆ ನಾನು ಬಂದೆ
ಮನಸು ನಿಂದೆ
ಹೆಣ್ಣು :
ಹಗಲು ರಾತ್ರಿ ನೋಡದೆ ಏಕೆ ಹೀಗೆ ಕಾಡಿದೆ
ಗಂಡು :
ವಾರೆ ವಾರೆ ಮದನಾರಿ
ಎದೆಯ ಬಡಿತ ಕೇಳಿ ಓಡಿ ಬಂದೆ
ಹೆಣ್ಣು :
ಹೆ.ಬಾರೋ ಬಾರೋ ಬಾರೋ ಮುದ್ದು ರಾಜ
ಸಿಡಿಗುಂಡು ಆದ್ರು ಮನಸು ಮಾತ್ರ ರೋಜ
ಗಂಡು :
ಹೇಯ್.ಬಾರೆ ಬಾರೆ ಬಾರೆ ನನ್ನ ಮೈನ
ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈನ
ಹೆಣ್ಣು :
ಲಗ್ನ ಆಗೋ ವೇಳೆಗೆ ಕಾಯಲಾರೆ ಹೀಗೆ
ಹೆಗಲ ಮೇಲೆ ಕೂರುವೆ
ನನ್ನಾ ಹೊತ್ತು ಕೊಂಡು ಹೋಗೋ ರನ್ನ
ನನ್ನಾ ಚಿನ್ನ
ಗಂಡು :
ಅವಸರಾನ ಕೋಮಲೆ
ಸ್ವಲ್ಪ ತಾಳು ಕೋಗಿಲೆ
ಯಾರೇ ಏನೇ ಹೇಳಲಿ
ನನ್ನ ದಿಲ್ಲು ನಿಂದೆ ತಾನೇ
ನಲ್ಲೆ ದುಂಡು ಮಲ್ಲೆ
ಹೆಣ್ಣು :
ಸರಸ ಈಗ ಸಾಗಲಿ ಸ್ವರ್ಗ ಇಲ್ಲೆ ಜಾರಲಿ
ಗಂಡು :
ನನ್ನ ನಿನ್ನ ಮದುವೇಗೆ ನಮ್ಮ ಬಳಗ
ಬಂದು ಹರಸಬೇಕು
ಹೆಣ್ಣು :
ಬಾರೋ ಬಾರೋ ಬಾರೋ ಮುದ್ದು ರಾಜ
ಸಿಡಿಗುಂಡು ಆದ್ರು ಮನಸು ಮಾತ್ರ ರೋಜ
ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳೀನ
ದೂರ ದೂರ ಇನ್ನೇಕೆ ನನ್ನಾ ನಿನ್ನಾ ನಡುವೆ
ಬಾರೋ ಬಾರೋ
ಗಂಡು :
ಬಾರೆ ಬಾರೆ ಬಾರೆ ನನ್ನ ಮೈನ
ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈನ
ಚಂದನದ ಗೊಂಬೆಯೆ ಭೂಮಿಗಿಳಿದ ರಂಭೆಯೆ
ನನ್ನ ಮುದ್ದು ಬಂಗಾರಿ ನನ್ನ ಮನಸಾ ಕದ್ದಾ
ಚೋರಿ ಚೋರಿ
ಹೆಣ್ಣು :
ಬಾರೋ ಬಾರೋ ಬಾರೋ ಮುದ್ದು ರಾಜ
ಸಿಡಿಗುಂಡು ಆದ್ರು ಮನಸು ಮಾತ್ರ ರೋಜ
ಗಂಡು :
ಹೆ.ಬಾರೆ ಬಾರೆ ಬಾರೆ ನನ್ನ ಮೈನ
ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈನ
ಕೈನ ಕೈನ ಕೈನ
No comments:
Post a Comment