Baanallu Neene Bhuviyallu Neene
ಬಾನಲ್ಲೂ ನೀನೇ ಬುವಿಯಲ್ಲೂ ನೀನೇ (ಎಸ್.ಪಿ.ಬಿ)
ಸಾಹಿತ್ಯ : ಚಿ|| ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ಬಾನಲ್ಲೂ ನೀನೇ ಬುವಿಯಲ್ಲೂ ನೀನೇ
ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ || ೧ ||
ಬರಿದಾದ ನನ್ನಾ ಬಾಳಲ್ಲಿ ಬ೦ದೇ
ಬಾಳಲ್ಲಿ ಬ೦ದೂ ಸ೦ತೋಷ ತ೦ದೇ
ಸ೦ತೋಷ ತ೦ದೂ ಮರೆಯಾಗಿ ಹೋದೇ
ಮರೆಯಾಗಿ ಹೋಗಿ ಹೂವಾಗಿ ಬ೦ದೇ
ಹೂವಾಗಿ ಬ೦ದು ಮುಗಿಲಲ್ಲಿ ನಿ೦ದೇ
ಮುಗಿಲಲ್ಲೂ ನೀನೇ ಮನದಲ್ಲೂ ನೀನೇ
ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ
ನನ್ನಿ೦ದ ನೀನು ದೂರಾಗಿ ಹೋದೇ
ದೂರಾಗಿ ಹೋಗಿ ಕಣ್ಣೀರ ತ೦ದೇ
ಕಣ್ಣೀರಿನಲ್ಲೇ ನಾ ಕರಗಿ ಹೋಗಿ
ನಾ ಕರಗಿ ಹೋಗಿ ಬಯಲಲ್ಲಿ ಬ೦ದೇ
ಈ ಬಯಲುದಾರಿಯ ಲತೆಯಾಗಿ ನಿ೦ದೇ
ನೋವಲ್ಲೂ ನೀನೇ ನಗುವಲ್ಲೂ ನೀನೇ
ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ
ಬಾನಲ್ಲೂ ನೀನೇ ಬುವಿಯಲ್ಲೂ ನೀನೇ
ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ
Kanasalu Neene Manasalu Neene Nannane
ಸಾಹಿತ್ಯ : ಚಿ|| ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
---------------------
ಕನಸಲು ನೀನೇ ಮನಸಲು ನೀನೇ
ನನ್ನಣೆ ನಿನ್ನಣೆ
ಒಲಿದ ನಿನ್ನ ಬಿಡೆನು ಚಿನ್ನ
ಇಂದು ಎಂದೆಂದಿಗು ನಿನ್ನನೆಂದೆಂದಿಗೂ
ಕನಸಲು ನೀನೇ ಮನಸಲು ನೀನೇ
ನನ್ನಣೆ ನಿನ್ನಣೆ
ಮೌನವು ಚೆನ್ನ ಮಾತಲು ಚೆನ್ನ
ನಗುವಾಗ ನೀನಿನ್ನು ಚೆನ್ನ
ನೊಡಲು ಚೆನ್ನ ಹಾಡಲು ಚೆನ್ನ
ನಿನಗಿಂತ ಯಾರಿಲ್ಲ ಚೆನ್ನ
ಸ್ನೇಹಕೆ ಸೋತೆ ಮೋಹಕೆ ಸೋತೆ
ಕಂಡಂದೆ ನಾ ಸೊತು ಹೊದೆ
ಮಾತಿಗೆ ಸೋತೆ ಪ್ರೀತಿಗೆ ಸೋತೆ
ಸೋಲಲ್ಲು ಗೆಲುವನ್ನೆ ಕಂಡೆ
ಕನಸಲು ನೀನೇ ಮನಸಲು ನೀನೇ
ನನ್ನಣೆ ನಿನ್ನಣೆ
ಒಲಿದ ನಿನ್ನ ಬಿಡೆನು ಚಿನ್ನ
ಇಂದು ಎಂದೆಂದಿಗು ನಿನ್ನನೆಂದೆಂದಿಗೂ
ಸೂರ್ಯನ ಆಣೆ ಚಂದ್ರನ ಆಣೆ
ಎದೆಯಲ್ಲಿ ನೀನಿಂತೆ ಜಾಣೆ
ಪ್ರಾಣವು ನೀನೆ ದೆಹವು ನಾನೆ
ಈ ತಾಯಿ ಕಾವೇರಿ ಆಣೆ
ಕನಸಲು ನೀನೇ ಮನಸಲು ನೀನೇ
ನನ್ನಣೆ ನಿನ್ನಣೆ
ಒಲಿದ ನಿನ್ನ ಬಿಡೆನು ಚಿನ್ನ
ಇಂದು ಎಂದೆಂದಿಗು ನಿನ್ನನೆಂದೆಂದಿಗೂ
ELLIRUVE MANAVA KAADUVA ROOPASIYE
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ಹಾಡು ಕೇಳಿ
ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೆ!
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು ಎಲ್ಲಿರುವೆ..
ಮನವ ಕಾಡುವ ರೂಪಸಿಯೆ
ತೇಲುವ ಹೀ ಮೊಡದ ಮೇಲೆ ನೀ ನಿಂತ ಹಾಗಿದೆ
ನಸು ನಗುತ ನಲಿ ನಲಿದು ನನ್ನ ಕೂಗಿದಂತಿದೆ
ತೇಲುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ
ತನುವೆಲ್ಲ ಹಗುರಾಗಿ ತೇಲಾಡುವಂತಿದೆ! ಹಾಡುವಂತಿದೆ
ಚೆಲುವೆ ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಕಣ್ಣಲ್ಲೆ ಒಲವಿನ ಗೀತೆ ನೀನು ಹಾಡಿದಂತಿದೆ
ನಿನ್ನಾಸೆ ಅತಿಯಾಗಿ ತೂರಡುವಂತಿದೆ
ಹಗಲಲ್ಲು ಚಂದ್ರನ ಕಾಣೊ ಭಾಗ್ಯ ನನ್ನದಾಗಿದೆ
ಚಂದ್ರಿಕೆಯ ಚೆಲುವಿಂದ ಬಾಳು ಭವ್ಯವಾಗಿದೆ! ಭವ್ಯವಾಗಿದೆ
ನಲ್ಲೆ ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೆ!
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು ಎಲ್ಲಿರುವೆ..
ಮನವ ಕಾಡುವ ರೂಪಸಿಯೆ
No comments:
Post a Comment