ಸಾಹಿತ್ಯ: ಕವಿರಾಜ್
ಸಂಗೀತ: ಎಮಿಲ್
ಗಾಯಕರು: ಸೋನು ನಿಗಮ್
ಪಿಸುಗುಡಲೇ ಸವಿ ಮಾತೊಂದಾ
ಕದ್ದು ಕೊಡಲೇ ಹೂ ಮುತ್ತೊಂದಾ
ಒಲವಿನಾ ಸಲಿಗೆಗೆ ಮನ ಕುಣಿಯುತಿದೆ
ಹೇಳಿಬಿಡು ಮಿತಿಮೀರಲೂ
ನಾ ಬೇಡುವೆನು
ಹೇಳಬೇಡ ಸುಮ್ಮನಿರಲು
ನನ್ನ ಮುಂದೆ ಹಾಡದೇನೆ ಮುಚ್ಚಿಕೊಂಡೆ ನಿನ್ನ ಗೀತೆ ತಪ್ಪುತ್ತಿದ್ದೆ ನಿನ್ನ ಎದೆ ತಾಳ
ನನ್ನ ಜೊತೆಜೊತೆಯಲ್ಲೆ ಮೆಲ್ಲ ಮೆಲ್ಲ ಸಾಗುತಲೆ ಏಕೆ ಬಚ್ಚಿ ಇಟ್ಟೆ ಮನದಾಳ
ಇಷ್ಟು ಕಾಯಬೇಕೇ..
ನಲುಮೆಗೆ ಬಾಯಿ ಬರಲು..
ಕನಸಿನಾ ಕಣಿವೆಗೆ ಮನ ಇಳಿಯುತಿದೆ
ಹೇಳಬೇಡ ಸುಮ್ಮನಿರಲು
ಪಿಸುಗುಡಲೇ ಸವಿ ಮಾತೊಂದಾ..
ನೂರ ಎಂಟು ಆಸೆಗೆಲ್ಲ ಕೋಟಿ ಕೋಟಿ ಬಣ್ಣಗಳ ಕನಸಿನ ಅಂಗಿಯ ತೊಡಿಸಿ
ಕಣ್ಣು ಕಣ್ಣು ಸೇರಿದಾಗ ಮೌನವೆ ಮಾತಾಡುವಾಗ ಎಲ್ಲವನ್ನು ಹೇಳಬೇಕೆ ಬಿಡಿಸಿ
ಕಪ್ಪು ಕಣ್ಣಿನಲ್ಲೆ ..
ಒಪ್ಪಿಬಿಡು ಅಪ್ಪಿಕೊಳ್ಳಲು..
ಚೆಲುವಿನಾ ಸುಲಿಗೆಗೆ ಮನ ಬಯಸುತಿದೆ
ಹೇಳಬೇಡ ಸುಮ್ಮನಿರಲು
ಪಿಸುಗುಡಲೇ ಸವಿ ಮಾತೊಂದಾ
ಕದ್ದು ಕೊಡಲೇ ಹೂ ಮುತ್ತೊಂದಾ
ಒಲವಿನಾ ಸಲಿಗೆಗೆ ಮನ ಕುಣಿಯುತಿದೆ
ಹೇಳಿಬಿಡು ಮಿತಿಮೀರಲೂ
ನಾ ಬೇಡುವೆನು, ನಾ ಬೇಡುವೆನು
ಹೇಳಬೇಡ ಸುಮ್ಮನಿರಲು
No comments:
Post a Comment