ಸಾಹಿತ್ಯ: ಶ್ರೀ ಚಂದ್ರು
ಸಂಗೀತ: ವಿ.ರವಿಚಂದ್ರನ್
ಗಾಯನ: ಶಂಕರ್ ಮಹದೇವನ್, ಸಿ.ಅಶ್ವಥ್, ಬಿ.ಜಯಶ್ರೀ
ಯಾರು ಯಾರು ಯಾರು ಯಾರು
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬದುಕೊ ದಾರಿ ನೂರು ನೂರು
ಬೆಳೆಯೋನೆಂದು ಸೋಲೊದಿಲ್ಲ
ಕಲಿತೋನೆಂದು ಬಾಗೊದಿಲ್ಲ
ತುಳಿಯೊನೆಂದು ಉಳಿಯೋದಿಲ್ಲ
ಯಾರನ್ಯಾರು ಬೆಳೆಸೊದಿಲ್ಲ
ಎಲ್ಲ ಗೊತ್ತು ಅನ್ನೋರಿಲ್ಲ
ಯಾರು ಇಲ್ಲಿ ಮೊದಲೇನಲ್ಲ
ಭೂಮಿ ಮೇಲೆ ದೇವರು ಮೊದಲ?
ದೇವರಿಗಿಂತ ನಾವೆ ಮೊದಲ?
ಗುರುವೇ ಇಲ್ಲದೆ ಕಲಿತೋರುಂಟು
ನಂಟೆ ಇಲ್ಲದೆ ಬದುಕೋರುಂಟು
ಭಾಷೆ ಮೊದಲ ಪ್ರಾಸ ಮೊದಲ?
ದೇಶ ಮೊದಲ ದ್ವೇಷ ಮೊದಲ?
ಜಾತಿ ಮೊದಲ ನೀತಿ ಮೊದಲ?
ಮೌನ ಮೊದಲ ಮುತ್ತಿನಂತ ಮಾತು ಮೊದಲ?
ನಾದ ಮೊದಲ ಭಾವ ಮೊದಲ?
ವೇದ ಮೊದಲ ಗಾದೆ ಮೊದಲ?
ವೀಣೆ ಮೊದಲ ಸರಿಗಮ ಸ್ವರ ಮೊದಲ?
ಜನನ ಮೊದಲ ಮರಣ ಮೊದಲ?
ಮಿಡಿತ ಮೊದಲ ತುಡಿತ ಮೊದಲ?
ತಾಯಿ ಹಾಲ ಹನಿಯೆ ಮೊದಲ
ಮೋಡ ಸುರಿವ ಮಳೆಯೆ ಮೊದಲ?
ಹೂವ ಒಡಲ ಮಧುವೆ ಮೊದಲ?
ಜೇನ ಹನಿಯ ಸಿಹಿಯೆ ಮೊದಲ?
ಅಚ್ಚ ಹಸಿರ ಪೈರೆ ಮೊದಲ?
ಸ್ವಚ್ಚ ಗಾಳಿ ಉಸಿರೆ ಮೊದಲ?
ಬೀಜಾನಾ ವೃಕ್ಷನಾ ಕೋಳಿನಾ ಮೊಟ್ಟೇನಾ?
ನಾನಾ ನೀನಾ ನೀನಾ ನಾನಾ
ಯಾರು ಯಾರು ಯಾರು ಯಾರು
ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು
ಬುದ್ಧಿ ಹೇಳೊ ಮಂದಿ ನೂರು
ಸಾಧನೆ ಇಲ್ಲದೆ ಗೆಲುವೇ ಇಲ್ಲ
ಸಾಧಿಸಿದವನಿಗೆ ಸಾವೆ ಇಲ್ಲ
ಸಾಗರ ವಿದ್ಯೆಗೆ ಕೊನೆಯೆ ಇಲ್ಲ
ಸಾಧಕರನ್ನು ಮರೆಯೋದಿಲ್ಲ
ಕನಸ ಕಾಣೊ ಕಣ್ಣಿನಲ್ಲಿ
ಶ್ರಮದ ನೆರಳು ಸುಳಿಯೋದಿಲ್ಲ
ತಿಳಿಯಬೇಕು ಗೆಲುವ ಗುಟ್ಟು
ಗೆದ್ದರೆ ಇಲ್ಲಿ ಜೀವನ್ವುಂಟು
ಸೋಲು ಗೆಲುವು ನಲಿವು ಉಳಿವು
ಬಾಳು ನಿನ್ನ ದಾರಿಲಿ
ಲೋಕ ನಿನ್ನ ಕೈಯಲ್ಲಿ
ಸತ್ಯ ನಿನ್ನ ಎದುರಲ್ಲುಂಟು
ಬಿಚ್ಚು ನಿನ್ನ ಬುದ್ಧಿ ಗಂಟು
ನೋಡು ನೋಡು ನೋಡು ನೋಡು
ಕಣ್ಣ ತೆರೆದು ಜಗವ ನೋಡು
ಇದುವೇ ನಿತ್ಯದ ಬದುಕಿನ ಹಾಡು
ಹಾಡು ಹಾಡು ಹಾಡು ಹಾಡು
ಸೃಷ್ಟಿ ಮೊದಲ ದೃಷ್ಟಿ ಮೊದಲ?
ಹೆಜ್ಜೆ ಮೊದಲ ಗೆಜ್ಜೆ ಮೊದಲ?
ಗೀತೆ ಮೊದಲ ಗಾತೆ ಮೊದಲ
ತತ್ವ ಮೊದಲ ತತ್ವ ಪದ ಮೊದಲ?
ತಾಳ ಮೊದಲ ಮೇಳ ಮೊದಲ?
ಹಾಸ್ಯ ಮೊದಲ ಲಾಸ್ಯ ಮೊದಲ?
ಜಾಣ ಮೊದಲ ಜಾನಪದ ಹಾಡು ಮೊದಲ?
ಕವನ ಮೊದಲ ಕವಿತೆ ಮೊದಲ?
ಬಣ್ಣ ಮೊದಲ ಕುಂಚ ಮೊದಲ?
ಜೋಗಿಪದ ಹಾಡೆ ಮೊದಲ?
ಗೀಗೀ ಪದ ಗೀತೆ ಮೊದಲ?
ಕಂಚಿನ ಕಂಸಾಳೆ ಮೊದಲ?
ಡೊಳ್ಳಿನ ದೊಡ್ಡಾಟ ಮೊದಲ?
ಕೋಲಿನ ಕೋಲಾಟ ಮೊದಲ?
ಬಯಲಿನ ಬಯಲಾಟ ಮೊದಲ?
ಶ್ರದ್ಧೆನಾ ಬುದ್ಧಿನಾ ವಿದ್ಯೆನಾ ಬಯಕೆನಾ?
ನಾನಾ ನೀನಾ ನೀನಾ ನಾನಾ
ನಿಸಗರಿ ಸನಿ ಸನಿರಿಸ ನಿದ ಸನಿದಪ ಮದಪಮ ದಪ ನಿದಪಮ ಗರಿಸನಿದನಿ
No comments:
Post a Comment