Tuesday, February 8, 2011

Sanju weds Geetha (2011) Kannada Lyrics - Sanju mathu geetha serabeku

ಚಿತ್ರ: ಸಂಜು ವೆಡ್ಸ್ ಗೀತಾ

ಸಂಗೀತ: ಜಸ್ಸಿ ಗಿಫ್ಟ್

ಗಾಯಕ: ಸೋನು ನಿಗಮ್



ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...

ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ ಇರುವಾಗ ನಾನು ಚಿಂತೆ ಏನು?

ನಿನ್ನ ಎಲ್ಲ ನೋವನ್ನು ಕೊಡುಗೇ ನೀಡು ನನಗಿನ್ನು

ನನ್ನ ಎಲ್ಲ ಖುಷಿಯನ್ನು ಕೊಡುವೇ ನಿನ್ನ ವಶಕಿನ್ನು

ಮಳೆಯಾ ಹನಿ ಕುರುಳೋ ದನಿ ತರವೇ?

ನಗಬಾರದೆ ನಗಬಾರದೆ ನನ್ನೊಲವೇ?

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...



ಆ ಕಣ್ಣಿಗೊಂದು ಈ ಕಣ್ಣಿಗೊಂದು

ಸ್ವರ್ಗಾನ ತಂದು ಕೊಡಲೇನು ಇಂದು

ಏನಾಗಲಿ ನನ್ನ ಸಂಗಾತಿ ನೀ..

ನಿನ್ನ ಈ ಕಣ್ಣಲೀ ಇದೆ ಕೊನೆಯಾ ಹನಿ

ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ

ಬೆಚ್ಚನೇಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ

ಇತಿಹಾಸದ ಪುತ ಕಾಣದ ಒಲುಮೆ ನೀಡುವೇ...

ಮಳೆಯಾ ಹನಿ ಕುರುಳೋ ದನಿ ತರವೇ?

ನಗಬಾರದೆ ನಗಬಾರದೆ ನನ್ನೊಲವೇ?

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...



ತಂಗಾಳಿಯಾಗೋ ಬಿರುಗಾಳಿಯಾಗೋ

ನೀ ಒಮ್ಮೆ ಬಂದು ನನ್ನ ಸೋಕಿ ಹೋಗು

ನಿನ್ನ ನೋಡದೇ... ಅಳುವೇ ಬರುತಿದೇ

ನಿನ್ನ ನಗುವಿಲ್ಲದೇ ಜಗ ನಿಂತಂತಿದೆ..

ನಿದಿರೆ ಬರದ ಕಣ್ಣಿಗೆ ಬಾರೆ ಹಗಲುಗನಸ ಹಾಗೆ

ಬಳಲಿ ಹೋದ ನನಗೆ ಬಾರೆ ಜೀವ ತುಂಬು ಹಾಗೆ

ಉಸಿರಾಡುವ ಶವವಾದೆ ನಾ... ನೀನು ಇಲ್ಲದೇ

ಮಳೆ ನಿಂತರೂ ಮರದಾ ಹನಿ ತರವೇ

ಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೇ..

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...



No comments:

Post a Comment