Gaganavu ello bhoomiyu ello ondoo ariye naa and Pancham Veda Premada Naada Lyrics in Kannada.
ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದು ಅರಿಯೆ ನಾ
ಎನಗೆ ನೀ ನೀಡಿದ ವಚನವ ಕೇಳಿ ತೇಲಿ ತೇಲಿ ಹೋದೆನಾ ||ಗ||
ನೂತನ ಜಗದಾ ಬಾಗಿಲು ತೆರೆಯಿತು
ಮನವನು ಕವಿದಾ ತೆರೆಯು ಸರಿಯಿತು
ಕಂಗಳು ಒಲವಿನ ಕಥೆಯ ಬರೆಯಿತು
ಕಾಲ್ಗಳು ಹರುಷದಿ ಕುಣಿ ಕುಣಿದಾಡಿತು...ಆ...ಆ..ಆ..ಆ
ಆ.....ಆ.........ಆ..........ಆ.........ಆ.............................||ಗ||
ಪ್ರೇಮವಸಂತದ ರಾಗವು ಮಿಡಿಯಿತು
ಆಶಾಗಾನದ ಪಲ್ಲವಿ ಹಾಡಿತು
ನವಜೀವನದ ಜ್ಯೋತಿಯು ಬೆಳಗಿತು
ಉಲ್ಲಾಸದಿ ಮನ ನಲಿ ನಲಿದಾಡಿತು ...ಆ...ಆ..ಆ..ಆ
ಆ.....ಆ.........ಆ..........ಆ.........ಆ.............................||ಗ||
Panchama Veda Premada Naada
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ವಿಜಯಭಾಸ್ಕರ್
ಗಾಯನ : ಪಿ.ಬಿ. ಶ್ರಿನಿವಾಸ್
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ ಹೃದಯ ಸಂಗಮ ಅನುರಾಗ ಬಂಧ
ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಜೀವ ಜೀವದ ಸ್ವರಸಂಚಾರ ಅಮೃತ ಚೇತನ ರಸಧಾರ
ರಾಧಾಮಾಧವ ವೇಣುವಿಹಾರ ಗೀತೆಯೆ ಪ್ರೀತಿಯ ಜೀವನಸಾರ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ದಿವ್ಯದಿಗಂತದ ಭಾಗ್ಯ ತಾರೆ ಭವ್ಯ ರಸಿಕತೆ ಬಾಳಿಗಾಸರೆ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
No comments:
Post a Comment