ಚಿತ್ರ: ಮೋನಾಲೀಸ
ಹಾಡಿದವರು: ಶ್ರೇಯ ಘೋಶಾಲ್ (೦+-), ರಾಜೇಶ್ ಕೃಷ್ಣ (೦->)
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ವಲೀಶ-ಸಂದೀಪ್
(೦+-)
ಈ ಮನಸೆಲ್ಲ ನೀನೆ ಕನಸೆ
ಈ ಕನಸೆಲ್ಲ ನೀನೆ ಮನಸೆ || ಪ ||
ಕಣ್ಣ ಮುಂದೆಯೂ ನೀನೆ
ರೆಪ್ಪೆ ಹಿಂದೆಯೂ ನೀನೆ
ರಾತ್ರಿ ನೆನಪಲೂ ನೀನೆ
ಹಗಲಗನಸಲೂ ನೀನೆ
ನಿನ್ನ ಮನಸು ನೂರು ಕನಸು ನಿನ್ನವಳಿಗೆ ಇರಲಿ
|| ಪ ||
(೦->)
ನೀ ನಕ್ಕರೆ ಸಾಕು ಜಾಣೆ ನನ್ನ ಮೇಲಾಣೆ
ನಿನ್ನ ಎದೆಯ ಅರಮನೆಯಲ್ಲಿ ದೊರೆಯು ನಾನೇನೆ
(೦+-)
ನನ್ನದೆಲ್ಲ ನಿನ್ನದೆ ತಾನೆ ಕೇಳು ನಿನ್ನಾಣೆ
ನಿನ್ನುಸಿರ ತಂಗಾಳಿಯಲಿ ನುಡಿಸುವೆ ವೀಣೆ
(೦->)
ಹಾಽಽ ಅನುರಾಗದ ಹಂಸಗೀತೆಯೆ ಹಗಲಿರುಳು ಕಿವಿಯ ತುಂಬಲಿ
(೦+-)
ಕನಸುಗಳ ತೇರು ಸಾಗಲಿ ಸ್ವರ್ಗಗಳ ದಾರಿ ಸವೆಯಲಿ
ನಿನ್ನ ಆಸೆ ನಿನ್ನ ಸೆಳೆತ ನಿನ್ನವಳಿಗೆ ಇರಲಿ
|| ಪ ||
ನೀ ಕಾಮನಬಿಲ್ಲಿನ ಹಾಗೆ ನನ್ನ ಒಳಗಿನ್ನು
ಮನಸು ಒಂದಾಗಿರಲು ಒಲವು ಹಾಲ್ಜೇನು
(೦->)
ಈ ಹೃದಯಕೆ ಸಾವಿರ ಬಿಂಬ ನೋಡು ಬಾ ನೀನು
ಪ್ರತಿ ಕ್ಷಣವೂ ನಿನ್ನ ಪ್ರತಿಬಿಂಬ ಕಾಣೆ ಇನ್ನೇನು
ನೆನಪುಗಳ ದೋಣಿ ಸಾಗಲಿ ತೀರದಿರೊ ಆಸೆ ತೀರಲಿ
ಕನಸುಗಳ ಕಡಲು ದಾಟಲಿ ಪ್ರೀತಿಸುವ ಹೃದಯ ಸೇರಲಿ
(೦+-)
ನಿನ್ನ ನಾಳೆ ನಿನ್ನ ವೇಳೆ ನಿನ್ನವಳಿಗೆ ಇರಲಿ
|| ಪ ||
No comments:
Post a Comment